ಉ.ಕ‌ ಸುದ್ದಿಜಾಲ ಕಾಗವಾಡ :

ಇತ್ತೀಚಿನ ದಿನಗಳಲ್ಲಿ ಕಳ್ಳ ಕದಿಮರಿಗೆ ಪೊಲೀಸರು ಅಂದರೆ ಭಯ ಇಲ್ಲದಂತಾಗಿದೆ. ಎದುರುಗಡೆಯೆ ಪೊಲೀಸ್ ಠಾಣೆ ಇದ್ದರೂ ಮಠದಲ್ಲಿದ್ದ ಹುಂಡಿ ಕಳುವು ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನಡೆದಿದೆ.

ಕಾಗವಾಡ ಪಟ್ಟಣದ ಚೆನ್ನಮ್ಮ ಸರ್ಕಲ್ ವೃತ್ತದಲ್ಲಿರುವ ಸದ್ಗುರು ಮರಿಮಹಾರಾಜರ ಮಠದಲ್ಲಿದ್ದ ಹುಂಡಿಗೆ ಕಣ್ಣ ಹಾಕಿದ ಖದಿಮರು ಸಿಸಿಟಿವಿ ಕ್ಯಾಮರಾ ಇದ್ದರು ಹಾರ್ಡಿಕ್ಸ್ ಸಹಿತ ಎತ್ತಿಕೊಂಡು ಹೋಗಿ ತಮ್ಮ ಕೈ ಚಳಕ ತೋರಿಸಿದ್ದಾರೆ ಈ ಒಂದು ಘಟನೆ ಕಾಗವಾಡ ಪೊಲೀಸ್ ರಿಗೆ ಮುಜುಗೂರಕ್ಕೆ ಒಳಗಾಗುವಂತೆ ಮಾಡಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಶ್ವಾನ ದಳದಿಂದ ಕಾರ್ಯಾಚರಣೆ ಚುರುಕುಗೊಂಡಿದೆ. ಈ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.