ವಿಜಯಪುರ :
ಸರ್ಕಾರಿ ಬಸ್ ಹಾಗೂ ಪಾರ್ಚೂನರ್ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿ ಪಾರ್ಚ್ಯೂನರ್ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವುನಪ್ಪಿರುವ ಘಟನೆ ವಿಜಯಪುರ – ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಡೆದಿದೆ.
ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ನಾಂದೇಡ ಮೂಲದ ನಾಲ್ವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಸಂದೀಪ ಪವಾರ (40) ಬಸವನಗರ ಸೋಲಾಪುರ, ಸೋಮನಾಥ ಕಾಳೆ (43) ರಾಜೂರ ಸೋಲಾಪುರ, ಚಿದಾನಂದ ನಾಗೇಶ ಸೂರ್ಯವಂಶಿ (45) ಸೋಲಾಪುರದ ನಾಂದೇಡ, ವಿಜಯಕುಮಾರ್ ದೊಡಮನಿ (32) ಶಾಸಕ ದೇವಾನಂದ ಚವ್ಹಾಣ ಅಳಿಯ. (ದೇವಾನಂದ ಹಿರಿಯ ಸಹೋದರಿ ಪುತ್ರ ಸಾವನಪ್ಪಿದ್ದಾರೆ. ಪಾರ್ಚ್ಯೂನರ್ ಕಾರಿನ ಅತೀವೇಗ ಹಾಗೂ ಚಾಲಕನ ಆಜಾಗರೂಕತೆಯೇ ಅಪಘಾತಕ್ಕೆ ಕಾರಣವಾಗಿದೆ.

ಕೆಎ 22 ಎಫ್ 2198 ನಂಬರಿನ ಬಸ್ ನರಗುಂದದತ್ತ ತೆರಳುತ್ತಿತ್ತು. ಎದುರಿಗೆ ವೇಗವಾಗಿ ಆಗಮಿಸಿದ ಎಂಎಚ್ 13 ಸಿಎಸ್ 3330 ನಂಬರಿನ ಪಾರ್ಚ್ಯೂನರ್. ಬಸ್ ಗೆ ಮುಖಾಮುಖಿಯಾಗಿ ಡಿಕ್ಕಿಯಾದ ಪಾರ್ಚ್ಯೂನರ್. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.