ಉ.ಕ‌ ಸುದ್ದಿಜಾಲ ಬೆಳಗಾವಿ :

ನನ್ನ ಹೆಸರು ಮತ್ತು ಫೊಟೊ ಬಳಸಿ ಇನ್‌ಸ್ಟಾಗ್ರಾಂ ನಕಲಿ ಖಾತೆ ತೆರೆದು ಯಾರೋ ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದುದು ಕಂಡು ಬಂದಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರು ಇಂತಹ ಖಾತೆಗಳ ಮನವಿ ತಿರಸ್ಕರಿಸಿ ಈ ಬಗ್ಗೆ ಎಚ್ಚರವಹಿಸಲು ಕೋರಲಾಗಿದೆ ಎಂದು ತಮ್ಮ ಟ್ವಿಟರ್ ಖಾತೆ ಮೂಲಕ ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ್ ತಿಳಿಸಿದ್ದಾರೆ.