ಉ.ಕ ಸುದ್ದಿಜಾಲ ಚಿಕ್ಕೋಡಿ :

ಚಿಕ್ಕೋಡಿ ‌ಶೈಕ್ಷಣಿಕ‌ ಜಿಲ್ಲೆಯಲ್ಲಿ ದೈಹಿಕ ಶಿಕ್ಷಕರಿಲ್ಲದೆ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಮರಿಚಿಕೆಯಾಗುತ್ತಿವೆ, ತಾಲೂಕು ಕೇಂದ್ರಗಳನ್ನ ಹೊರತು ಪಡಿಸಿದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೈಹಿಕ‌ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನ ತೋರಿಸಲು ಸಾಧ್ಯವಾಗಿತ್ತಿಲ್ಲ.

ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣಕ್ಕೆ ಸಮಾನವಾಗಿ ಕ್ರೀಡೆಗೂ ಮಹತ್ವ ನೀಡಿ ಎಂದು ಭಾಷಣ ಬೀಗಿಯುತ್ತಿದ್ದರೆ. ಆದರೆ, ಅದಕ್ಕೆ ತಕ್ಕ ನಾಗೆ ದೈಹಿಕ ಶಿಕ್ಷಕರಿಲ್ಲದೆ  ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಏನಾದರೂ ಸಾಧಿಸುವ ಛಲ ಹೊಂದಿದ್ದರು ಕೂಡಾ ಅವು ಮರಿಚಿಕೆಯಾಗುತ್ತಿದೆ.

ಗಡಿ ಭಾಗದ ಭಾಗಶಃ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ…ಈಗಾಗಲೇ ತಾಲೂಕು ಮಟ್ಟದ ಕ್ರೀಡೆಗಳು ಆರಂಭ…ದೈಹಿಕ ಶಿಕ್ಷಕರಿಲ್ಲದ ಪರಿಣಾಮ ವಿದ್ಯಾರ್ಥಿಗಳಿಗಿಲ್ಲ ತರಬೇತಿ…ಚಿಕ್ಕೋಡಿ ‌ಶೈಕ್ಷಣಿಕ‌ ಜಿಲ್ಲೆಯಲ್ಲಿ ದೈಹಿಕ ಶಿಕ್ಷಕರಿಲ್ಲದೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಾದ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಮರಿಚಿಕೆ…ದೈಹಿಕ ಶಿಕ್ಷಕರ ನೇಮಕಕ್ಕೆ ಪೋಷಕರ ಆಗ್ರಹ ಮಾಡುತ್ತಿದ್ದಾರೆ.

ಆದರೆ, ಸರ್ಕಾರದ ನಿರ್ಲಕ್ಷ್ಯದಿಂದ ಮಕ್ಕಳಲ್ಲಿ ಇರುವ ಪ್ರತಿಭೆ ಹೊರಬರದೆ ಮರೆಯಾಗುತ್ತಿವೆ. ಮಕ್ಕಳಿಗೆ ಪಾಠ ಎಷ್ಟು ಮುಖ್ಯವೋ ಆಟವು ಕೂಡಾ ಅಷ್ಟೇ ಮುಖ್ಯ, ಚಿಗುರೊಡೆಯ ಮೊಳೆಕೆಯಲ್ಲಿ ಅನ್ನುವಂತೆ ಪ್ರಾಥಮಿಕ ವಿಭಾಗದಲ್ಲಿ ಮಕ್ಕಳಿಗೆ ದೊರೆಯಬೇಕಾದ ದೈಹಿಕ‌ಶಿ ಕ್ಷಣ ದೊರೆಯದೆ ಇರುವುದರಿಂದ ಮಕ್ಕಳಿಗೆ ಆಟದ ತರಬೇತಿ ಇಲ್ಲ ಎನ್ನುತ್ತಾರೆ ಸ್ಥಳೀಯ ಪಾಲಕರು.

ಸರ್ಕಾರ ಶಾಲೆಗೆ ಹೋಗುವವರು ಬಡ ಮಕ್ಕಳು, ಬಡ ಮಕ್ಕಳ ಅನಕೂಲಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಹಾಗೂ ಹೈಟೆಕ್ ಸ್ಪರ್ಶ ನೀಡುತ್ತಿದೆ‌ ಆದರೆ, ಸರ್ಕಾರ ಶಿಕ್ಷಕರ ನೇಮಕಾತಿಯಲ್ಲಿ ಹಿಂದೆಟು ಹಾಕುತ್ತಿರುವುದರಿಂದ ಬಡ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ.

ಒಟ್ಟಿನಲ್ಲಿ ಸರ್ಕಾರಿ ಶಾಲೆ ಉಳಿಸಿ ಬೆಳಸಿ ಎಂದು ಘೋಷ್ಯವಾಕ್ಯಗಳು ಕೇಳುತ್ತಲಿವೆ ಆದರೆ, ಮಕ್ಕಳಿಗೆ ಬೇಕಾದ ಮೂಲ ಸೌಕರ್ಯ ಜೊತೆಗೆ ಶಿಕ್ಷಕರನ್ನ ನೇಮಕ ಮಾಡಲು ಮುಂದಾಗುತ್ತಿಲ್ಲ. ವಿದ್ಯಾರ್ಥಿಗಳ ಜೀವನ ಜೊತೆ ಆಟವಾಡದೆ, ಆದಷ್ಟು ಬೇಗ ದೈಹಿಕ ಶಿಕ್ಷಕರನ್ನ ನೇಮಕ ಮಾಡ‌ ಎಂದು ಪಾಲಕರು ಆಗ್ರಹಿಸುತ್ತಿದ್ದಾರೆ.