ಉ.ಕ ಸುದ್ದಿಜಾಲ ಅಥಣಿ :
ಅವರಿಬ್ಬರೂ ಸರ್ಕಾದಲ್ಲಿ ಬಿಗಿ ಹಿಡಿತ ಹೊಂದಿರುವ ನಾಯಕರು. ಕ್ಷೇತ್ರದ ಕೆಲಸದಲ್ಲಿ ಜಿದ್ದಿಗೆ ಬಿದ್ದಂತೆ ಒಬ್ಬರಿಗೊಬ್ಬರು ಕಾಂಪಿಟೇಷನ್ ಕೊಡ್ತಿರೋ ಜನಪ್ರತಿನಿಧಿಗಳು ಒಬ್ಬರು ಸರ್ಕಾರ ತೆಗೆದು ಸರ್ಕಾರ ತಂದ್ರೆ ಇನ್ನೊಬ್ಬರು ಪಕ್ಷದಲ್ಲಿ ಸರ್ಕಾರದ ಮಟ್ಟದಲ್ಲಿ ಒಳ್ಳೆ ವರ್ಚಸ್ಸು ಹೊಂದಿರುವವರು. ಅವರಿಬ್ಬರೂ ಪ್ರತಿನಿಧಿಸೋ ಕ್ಷೇತ್ರದ ಬಹುದೊಡ್ಡ ಪಟ್ಟಣದಲ್ಲಿ ಸರ್ಕಾರಿ ಪ್ರೌಢ ಶಾಲೇನೆ ಇಲ್ಲ ಅರೇ ಅಷ್ಟಕ್ಕೂ ಆ ನಾಯರು ಯಾರು? ಯಾವುದು ಆ ಕ್ಷೇತ್ರ ಡಿಟೇಲ್ಸ್ ಇಲ್ಲಿದೆ ನೋಡಿ..
ಬೆಳಗಾವಿ ಇಡೀ ರಾಜ್ಯವನ್ನೆ ಅಲುಗಾಡಿಸುವ ಒಂದು ಶಕ್ತಿ ಕೇಂದ್ರ ಇಲ್ಲಿನ ರಾಜಕಾರಣಿಗಳು ತಮಗೆ ಆಗಬರಲ್ಲ ಅಂದ್ರೆ ಒಂದಿಡೀ ಸರ್ಕಾರವನ್ನೆ ಕೆಡವಿ ಹೊಸ ಸರ್ಕಾರ ರೂಪಿಸುವಷ್ಟು ಬಲಿಷ್ಟರು. ಸಧ್ಯ ನಾವು ನಿಮಗೆ ಹೇಳಲು ಹೊರಟಿರುವ ಸ್ಟೋರಿ ಇದೇ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕುರಿತು.. ಇಲ್ಲಿ ಇಬ್ಬರು ಪ್ರಭಾವಿ ನಾಯಕರಿದ್ದಾರೆ.
ಒಬ್ಬರು ಮಹೇಶ್ ಕುಮಟಳ್ಳಿ ಮತ್ತೊಬ್ಬರು ಮಾಜಿ ಡಿಸಿಎಂ ಲಕ್ಷ್ಮಣ ಸವದಿ. ಈ ಇಬ್ಬರು ಸಹ ಜೋಡೆತ್ತಿನ ರೀತಿ ಪ್ರತಿನಿಧಿಸುವ ಕ್ಷೇತ್ರ ಅಥಣಿ.. ಸಧ್ಯ ವಿಷ್ಯ ಎನಪ್ಪ ಅಂದ್ರೆ ಅಥಣಿ ಪಟ್ಟಣದಲ್ಲಿ ಒಂದೇ ಒಂದು ಸರ್ಕಾರಿ ಪ್ರೌಢ ಶಾಲೆಯೇ ಇಲ್ಲ ಎನ್ನುವುದು. ಹೌದು ಅಥಣಿ ಪಟ್ಟಣದಲ್ಲಿ ಒಂದೇ ಒಂದು ಸರ್ಕಾರಿ ಫ್ರೌಡ ಶಾಲೆ ಇಲ್ಲ.
ಅಥಣಿ ತಾಲೂಕು ಕೇಂದ್ರದಲ್ಲಿ ಸರ್ಕಾರಿ ಪ್ರೌಢ ಶಾಲೆ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕೂಡ ಸಲ್ಲಿಸಲಾಗಿದ್ದು ಸರ್ಕಾರದ ಮೇಲೆ ಕೂಡ ಒತ್ತಡ ಹಾಕಲಾಗಿದ್ದು ಸರ್ಕಾರಮಟ್ಟದಲ್ಲಿ ಪರಿಶೀಲನೆ ಹಂತದಲ್ಲಿ ಇದೆ ಅಂತ ಹೇಳುತ್ತಿದ್ದಾರೆ.
ಸಧ್ಯ ಅಥಣಿ ಗ್ರಾಮೀಣ ಭಾಗದಲ್ಲಿ 37 ಪ್ರೌಢ ಶಾಲೆಗಳಿವೆ. ಅದರಲ್ಲಿ 19 ಅನುದಾನಿತ 23 ಅನುದಾನ ರಹಿತ ಪ್ರೌಢ ಶಾಲೆಗಳಿವೆ. ಇನ್ನು ಪಟ್ಟಣದಲ್ಲಿ 4 ಅನುದಾನಿತ ಹಾಗೂ 4 ಅನುದಾನ ರಹಿತ ಪ್ರೌಢ ಶಾಲೆಗಳಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮೊರೆ ಹೋಗುವ ಪರಿಸ್ಥಿತಿ ಪೋಷಕರು ಹಾಗೂ ಮಕ್ಕಳಿಗೆ ಎದುರಾಗಿದೆ.
ಸ್ವತಂತ್ರ ಸಿಕ್ಕು ಅದರ 75 ನೇ ವರ್ಷದ ಅಮೃತ ಮಹೋತ್ಸವ ಮಾಡುವ ಸಂದರ್ಭದಲ್ಲಿ ದೇಶವಿದೆ. ಶಿಕ್ಷಣಕ್ಕೆ ಅಂತಲೇ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಇಂತಹ ಸಂದರ್ಭದಲ್ಲಿ ಇಷ್ಟು ಪ್ರಭಾವಿ ನಾಯಕರಿರುವ ಊರಲ್ಲಿಯೇ ಒಂದು ಸರ್ಕಾರಿ ಪ್ರೌಢ ಶಾಲೆಯೇ ಇಲ್ಲದಿರುವುದು ವಿಪರ್ಯಾಸ.
ಅಥಣಿ ತಾಲೂಕು ಕೇಂದ್ರ ಕಾರಣ ಇಲ್ಲಿಗೆ ಅಕ್ಕ ಪಕ್ಕದ ಹಳ್ಳಿಯ ಹಾಗೂ ಪಟ್ಟಣದ ಬಡ ಮಕ್ಕಳು ಪ್ರಾಥಮಿಕ ಶಾಲೆಯನ್ನು ಮುಗಿಸಿದ ಬಳಿಕ ಹೈಸ್ಕೂಲ್ ಶಿಕ್ಷಣ ಪಡೆಯಬೇಕು ಅಂದರೆ ಇಲ್ಲಿ ಸರ್ಕಾರಿ ಶಾಲೆಯಿಲ್ಲ ಹೀಗಾಗಿ ಖಾಸಗೀ ಶಾಲೆಗಳಿದ್ದು ಇಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳಲು ಹೋಗಬೇಕಾದ ಅನಿವಾರ್ಯತೆ ಇದ್ದು ಖಾಸಗಿ ಶಾಲೆಗಳು ನಿಗಢಿಪಡಿಸುವ ಶುಲ್ಕ ವಿಧಿಸಿ ಹೋಗಬೇಕು ಹೀಗಾಗಿ ಇದು ಇಲ್ಲಿನ ವಿದ್ಯಾರ್ಥಿಗಳ ಪೋಷಕರಿಗೆ ಹೊರೆಯಾಗುತ್ತಿದ್ದು ಸರ್ಕಾರಿ ಪ್ರೌಢ ಶಾಲೆ ಆರಂಭಿಸುವಂತೆ ಆಗ್ರಹಿಸುತ್ತಿದ್ದಾರೆ.
ಒಟ್ಟಿನಲ್ಲಿ ಇಬ್ಬರೂ ನಾಯಕರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಅದರಲ್ಲೂ ಅವರ ಸ್ವಂತ ಊರಿನಲ್ಲಿಯೇ ಸರ್ಕಾರಿ ಪ್ರೌಢ ಶಾಲೆ ಇಲ್ಲದಿರುವ ಸಂಗತಿ ನಿಜಕ್ಕೂ ವಿಪರ್ಯಾಸವೇ ಸರಿ. ಇನ್ನಾದರೂ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಡಿಸಿಎಂ ಲಕ್ಷ್ಮಣ ಸವದಿಯವರು ಎಚ್ಚೆತ್ತುಕೊಂಡು ಸರ್ಕಾರಿ ಪ್ರೌಢ ಶಾಲೆಯ ಅಥಣಿ ಪಟ್ಟಣಕ್ಕೆ ಮಂಜೂರು ಮಾಡಿಸ್ತಾರಾ ಕಾದು ನೋಡಬೇಕು.