ಉ.ಕ ಸುದ್ದಿಜಾಲ ಚಿಕ್ಕಬಳ್ಳಾಪುರ :
ದಾಂಪತ್ಯದಲ್ಲಿ ಜಿಗುಪ್ಸೆ ಹೊಂದಿ ದಂಪತಿಗಳು ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಸೂಲಿಕುಂಟೆ ಗ್ರಾಮದಲ್ಲಿ ನಡೆದಿದೆ.
ಸೂಲಿಕುಂಟೆ ಗ್ರಾಮದ ಶಶಿಕಲಾ (22) ಚಂದ್ರಶೇಖರ್( 28) ಮೃತ ದುರ್ಧೈವಿಗಳು. ಒಂದೇ ಸೀರೆಯಲ್ಲಿ ನೇಣಿಗೆ ಶರಣಾದ ದಂಪತಿಗಳು. ಐದು ವರ್ಷಗಳ ಹಿಂದೆ ವಿವಾಹವಾಗಿದ್ದ ಚಂದ್ರಶೇಖರ್ ಶಶಿಕಲಾ. ಇವರು ವಿವಾಹವಾಗಿ ಐದು ವರ್ಷಗಳಾದ್ರು ಮಕ್ಕಳಿಲ್ಲದೆ ಕೊರಗುತಿದ್ದ ದಂಪತಿಗಳು.
ಸಾಯಂಕಾಲ ಆರು ಗಂಟೆ ಸುಮಾರಿಗೆ ಬಾಗಿಲು ಹಾಕಿಕೊಂಡ ಪತಿ, ಪತ್ನಿ ಎಷ್ಟೊತ್ತಾದ್ರು ಬಾಗಿಲು ತೆರೆಯದ ಹಿನ್ನೆಲೆ ಅನುಮಾನಗೊಂಡ ಸ್ಥಳೀಯರು. ಬಾಗಿಲು ತೆರದು ನೋಡಿದಾಗ ಒಂದೇ ಸೀರೆಯಲ್ಲಿ ನೇಣಿಗೆ ಶರಣಾಗಿದ್ದ ಪತಿ ಪತ್ನಿ. ಮೃತದೇಹಗಳ ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.