ಉ.ಕ ಸುದ್ದಿಜಾಲ ಚಿಕ್ಕೋಡಿ :
ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಮಳೆ ಪ್ರಮಾಣ ಕಳೆದೆರಡು ದಿನಗಳಿಂದ ಕಡಿಮೆಯಾದರೂ ಸಹಿತ ಕೃಷ್ಣಾ ನದಿ ನೀರಿನ ಒಳ ಹರಿವು ತಟ್ಟಸ್ಥವಾಗಿ ಉಳದಿದ್ದು ಕೃಷ್ಣಾ ನದಿ ತೀರದ ಹಲವು ದೇವಸ್ಥಾನಗಳು ಜಲಾವೃತವಾಗಿವೆ.
ಎರಡು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ದೇವಸ್ಥಾನ ಜಲಾವೃತಗೊಂಡಿವೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರ ಸುತ್ತುವರೆದ ಕೃಷ್ಣಾ ನದಿ ನೀರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿರುವ ಬಂಗಾಲಿ ಬಾಬಾ ದೇವಸ್ಥಾನ ಜಲಾವೃತ. ನಾಲ್ಕು ಅಡಿ ನೀರಲ್ಲೇ ನಡೆದುಕೊಂಡು ದೇವಸ್ಥಾನಕ್ಕೆ ಹೋಗುತ್ತಿರುವ ಭಕ್ತರು.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ನರಸಿಂಹವಾಡಿ ದತ್ತ ಮಂದಿರ, ದೇವಸ್ಥಾನ ಮುಳುಗಡೆಯಾದರೂ ಸಹ ನಡು ಮಟ್ಟದ ನೀರಲ್ಲೆ ದೇವರ ದರ್ಶನ, ನಡುಮಟ್ಟದ ನೀರಿನಲ್ಲಿ ಬಂದು ದತ್ತ ದೇವರ ದರ್ಶನ ಪಡೆಯುತ್ತಿರುವ ಭಕ್ತರು.
ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹೀರಣ್ಯಕೇಶಿ ಹಾಗೂ ಘಟಪ್ರಭಾ ನದಿಗಳು, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕೋಟಬಾಗಿ ಗ್ರಾಮದ ಸುಪ್ರಸಿದ್ಧ ದುರ್ಗಾದೇವಿ ದೇವಸ್ಥಾನ ಜಲಾವೃತ ಕರ್ನಾಟಕ ಹಾಗೂ ಮಹಾರಾಷ್ಟ್ರದ ಅಪಾರ ಭಕ್ತರನ್ನ ಹೊಂದಿರುವ ದೇವಸ್ಥಾನ ಜಲಾವೃತ. ದೇವಸ್ಥಾನದ ಹೊರಗಡೆ ಭಾಗ ಹಾಗೂ ಗರ್ಭ ಗುಡಿ ಜಲಾವೃತ. ಜಲಾವೃತಗೊಂಡರು ದೇವಿಯ ದರ್ಶನ ಪಡೆಯುತ್ತಿರುವ ಕೆಲ ಭಕ್ತರು. ದೇವಸ್ಥಾನದಲ್ಲಿನ ಬೆಲೆ ಬಾಳುವ ಸಾಮಗ್ರಿಗಳನ್ನ ಸ್ಥಳಾಂತರಿಸಿದ ಅರ್ಚಕರು.