ಉ.ಕ ಸುದ್ದಿಜಾಲ ಐನಾಪೂರ :

ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಇವರು ಮೇಲ್ದರ್ಜೆಯ ಜನರ ಕಾಟವನ್ನು ಸಹಿಸಿಕೊಂಡು ತಮ್ಮ ಜೀವನದಲ್ಲಿ ಸಂಘರ್ಷ ಮಾಡುತ್ತಾ ಮಹಿಳೆಯರಿಗೆ ಶಿಕ್ಷಕರಾಗಿ ಮುಂದೆ ಬಂದಿದ್ದರಿಂದ ಇಂದಿನ‌ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ನಾವೆಲ್ಲ ಮಹಿಳೆಯರು ಸ್ವಾವಲಂಬಿಯಾಗಿ ಎಲ್ಲ ಕ್ಷೇತ್ರದಲ್ಲಿ ಪ್ರತಿನಿಧಿಸುತ್ತಿದ್ದೇವೆ ಎಂದು ಅಥಣಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಸದಾಶಿವ ಬುಟಾಳಿ ಹೇಳಿದರು.

ರವಿವಾರದಂದು ಐನಾಪೂರ ಪಟ್ಟಣದ ಮಾಳಿ ಸಮಾಜದ ಭವನದಲ್ಲಿ ಶ್ರೀ ಸಿದ್ದೇಶ್ವರ ಮಾಳಿ ಸಮಾಜ ಹಾಗೂ ಶ್ರೀ ಬಸವಜ್ಯೋತಿ ಪ್ರತಿಷ್ಠಾಣ ಐನಾಪೂರ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಶಿಕ್ಷಕಿ ಅಕ್ಷರದ್ವ ಸಾವಿತ್ರಿಬಾಯಿ ಪುಲೆಯವರ ಜಯಂತಿ ನಿಮಿತ್ಯ ಪ್ರತಿಭಾ ಪುರಸ್ಕಾರ ಹಾಗೂ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಅಥಣಿ ತಾಲೂಕಿನ ಹಿರಿಯ ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಸದಾಶಿವ ಬುಟಾಳೆ ಮಾತನಾಡಿ ಸ್ವಾತಂತ್ರ್ಯ ಪೂರ್ವದಲಿ ಮತ್ತು ಸ್ವಾತಂತ್ರ್ಯ ನಂತರ ಸವರ್ಣಿಯರು ಹಿಂದೂಳಿದವರ ಮಹಿಳೆಯರಿಗೆ ಬಹಳಷ್ಟು ತೊಂದರೆ ನೀಡಿದ್ದಾರೆ. ನಾನು ಕಣ್ಣಾರೆ ವಿಧವೆಯರ ತೆಲೆ ಮುಂಡನೆ ಮಾಡಿದ್ದನ್ನ ಕಂಡಿದ್ದೇನೆ.

ಇಂತಹ ಕೆಟ್ಟ ಸಮಾಜದಲ್ಲಿ ಸಾವಿತ್ರಿಬಾಯಿ ಪುಲೆ ಎದೆತಟ್ಟಿ ನಿಂತು ಎಲ್ಲವನ್ನೂ ವಿರೋಧಿಸಿ ಮಹಿಳೆಯರಿಗಾಗಿ ಬೋಧನೆ ಮಾಡುತ್ತಾ ಪ್ರಥಮ ಶಿಕ್ಷಕಿಯಾಗಿದ್ದರಿಂದ ಇಂದು ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ತಮ್ಮ ಛಾಪನ್ನು ಮೂಡಿಸಿ ಅಧಿಕಾರ ಚಲಾಯಿಸುತ್ತಿದ್ದಾರೆ. ಇದೆಲ್ಲ ಅವರ ಕೃಪೆ ಎಂದು ಹೇಳಿ ಸಾವಿತ್ರಿಬಾಯಿ ಮಾಳಿ ಸಮಾಜದವರು ಎಂದು ಇತ್ತೀಚೆಗೆ ತಿಳದಿದ್ದು, ಐನಾಪೂರದಲ್ಲಿ ಮಾಳಿ ಸಮಾಜ ಒಗ್ಗಟಾಗಿದ್ದು ಕಷ್ಟ ಸುಖ ಹಂಚಿಕೊಳ್ಳುತ್ತಿದ್ದಾರೆ ಇದೊಂದು ಒಳ್ಳೆಯ ಬೆಳವಣಿಗೆ ಎಂದರು

ಅಥಣಿಯ ಖ್ಯಾತ ನ್ಯಾಯವಾದಿಗಳಾದ ಅಮೋಘಸಿದ್ದ ಕೊಬರಿ ಇವರು ಮಾತನಾಡಿ ಅನಕ್ಷರಸ್ಥರಿಗಿಂತ ಅಕ್ಷರಸ್ಥರೆ ಹೆಚ್ಚಾಗಿ ತಪ್ಪು ಮಾಡುತ್ತಿದ್ದು ಇಂದಿನ ವಿಜ್ಞಾನ ಯುಗದ ಹೆಸರಿನಲ್ಲಿ ಒಳ್ಳೆಯ ಸ್ಥಾನ ಮಾನದಲ್ಲಿರುವ ಯುವಕ – ಯುವತಿಯರು ಜನ್ಮ ನೀಡಿದ ತಂದೆ ತಾಯಿ ಇವರನ್ನು ದೂರ ಇಟ್ಟು ಅನೇಕ ತೊಂದರೆ ನೀಡುತ್ತಿದ್ದಾರೆ ಮತ್ತು ಇವರ ಸಂಸಾರಿಕ ಜೀವನದಲ್ಲಿ ವಿಚ್ಚೆದನೆ ಕೇಳುತ್ತಿದ್ದಾರೆ.

ಇಂತವರಿಂದಲೇ ಸಮಾಜದಲ್ಲಿ ಕೆಲ ಬ್ರೂಣ ಹತ್ಯೆಗಳು ಹೆಚ್ಚಾಗಿ ನಡೆಯುತ್ತಿವೆ ಇದರ ಪರಿಣಾಮ 1000 ಗಂಡು ಮಕ್ಕಳ ಜನಿಸಿದರೆ 725 ಹೆಣ್ಣು ಮಕ್ಕಳು ಜನಿಸುತ್ತಿವೆ. ಈ ವ್ಯತ್ಯಾಸ ಅಕ್ಷರಸ್ಥರಿಂದಲೇ ನಿರ್ಮಾಣವಾಗಿದೆ. ಮಾಳಿ ಸಮಾಜದ ಮುಗ್ದ ಜನ ಅವರ ಕಷ್ಟ ಸುಖದಲ್ಲಿ ನಾನು ಇದ್ದೇನೆ ಎಂದು ಸಮಾಜದ ಬಾಂಧವರನ್ನ ಉದ್ದೇಶಿಸಿ ಮಾತನಾಡಿದರು.

ಐನಾಪೂರ ಮಾಳಿ ಸಮಾಜದ ಅಧ್ಯಕ್ಷ ಸುರೇಶ ಕಾಗಲಿ ಮಾತನಾಡಿ ಸಮಾಜದ ಏಳಿಗೆಗಾಗಿ ಎಲ್ಲ ಹಿರಿಯರು, ಯುವಕರು ಒಂದು ಗುಇಡಿ ಸಹಕರಿಸುತ್ತಿದ್ದಾರೆ. ಸಮಾಜದ ಅನೇಕ ಉದ್ಯಮಿಗಳು, ಪ್ರತಿಭಾವಂತರು ಶಿಕ್ಷಣ ಪ್ರೇಮಿಗಳು ಸಹಕರಿಸುತ್ತುದ್ದಾರೆ ಎಂದು ಹೇಳಿ ಸಮಾಜದ ಅಭಿವೃದ್ಧಿಗಾಗಿ ನಾನೂ ಹಗಲಿರುಳು‌ ಶ್ರಮೀಸುತ್ತೇನೆ ಎಂದರು. ಇವರನ್ನು ಕಾಗವಾಡ ತಾಲೂಕಾ ಪತ್ರಕರ್ತ ಸಂಘದ ಅಧ್ಯಕ್ಷ ಆಗಿದ್ದರಿಂದ ಸನ್ಮಾನಿಸಲಾಯಿತು. ಇದೇ ರೀತಿ ಸಮಾಜದ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಅತಿಥಿಗಳಿಂದ ಬಹುಮಾನ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಾವಿತ್ರಿಬಾಯಿ ಪುಲೆ ಇವರ ಬಗ್ಗೆ ತಮ್ಮ ವಿಚಾರ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ರವಿ ಬಡಕಂಬಿ, ರಾಮು ಕಾಗಲಿ, ಕೇದಾರಿ‌ ನಾಂದಣಿಕರ, ಮುರಗೆಪ್ಪ ಬೆಳಕೂಡ, ವಿಠ್ಠಲ ಕಾಗಲಿ, ಮಾರುತಿ ಜಿರಗಾಳೆ, ಶ್ರೀಶೈಲ ನಾಂದಣಿಕರ ಉಪಸ್ಥಿತರಿದ್ದರು.