ಉ.ಕ ಸುದ್ದಿಜಾಲ ಅಥಣಿ :
ಯುವಕನೊಬ್ಬ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬರುವಾಗ ಬೈಕ್ ಅಪಘಾತವಾಗಿ ನಾಲ್ಕು ದಿನಗಳ ಚಿಕಿತ್ಸೆ ಬಳಿಕ ಆಸ್ಪತ್ರೆಯಲ್ಲಿ ಸಾವಿಗೆಡಾಗಿರುವ ಘಟನೆಗೆ ಈಗ ಪತ್ನಿ ಪತಿ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು. ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನಾಗನೂರು ಪಿ ಎ ಗ್ರಾಮದ ಯುವಕ ನಿಂಗಪ್ಪ ಚೌಗಲಾ (27) ಮೃತ ದುರ್ದೈವಿಯಾಗಿದ್ದು. ಪೊಲೀಸ್ ವರದಿಗಳ ಪ್ರಕಾರ, ಈತ ಮಾರ್ಚ್ 23 ರಂದು ರಾತ್ರಿ ಪಕ್ಕದ ಗ್ರಾಮದಿಂದ ನಿತ್ಯದ ಕೂಲಿ ಕೆಲಸ ಮುಗಿಸಿಕೊಂಡು ರಾತ್ರಿ ಮರಳಿ ಮನೆಗೆ ಬರುವಾಗ ನಾಗನೂರು – ಅನಂತಪುರ ರಸ್ತೆ ಮೇಲೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಅದೆ ಗ್ರಾಮದ ರಮೇಶ ಎಂಬಾತನಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದರು, ಅದರಲ್ಲಿ ರಮೇಶ ಎಂಬಾತನಿಗೂ ಸಣ್ಣ ಪುಟ್ಟ ಗಾಯಗಳಾಗಿ ಆತನು ಅಥಣಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ.
ಗಂಭೀರ ಗಾಯಗೊಂಡ ಬೈಕ್ ಸವಾರ ನಿಂಗಪ್ಪ ಮಿರಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕಿತ್ಸೆ ಫಲಿಸದೆ ಮಾರ್ಚ್ 28 ರಂದು ಸಾವಿಗೆಡಾಗಿದ್ದ. ಆದ್ರೆ ಪೊಲೀಸ್ ವರದಿಯ ಪ್ರಕಾರ ಇದು ಅಪಘಾತ ಕೇಸ್ ಎಂದು ದಾಖಲಾಗಿದ್ದು, ಮೃತನ ಪತ್ನಿ ರೇಷ್ಮಾ, ಇದು ಅಪಘಾತವಲ್ಲ ಇದು ಪೂರ್ವ ನಿಯೋಜಿತ ಕೊಲೆ ಎಂದು ಪೊಲೀಸ್ ರಿಗೆ ಮರು ದೂರು ಸಲ್ಲಿಸಿದ್ದಾಳೆ.
ಇದೆ ಕೇಸ್ ಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮುನ್ನ ಆಂಬುಲೆನ್ಸ್ ನಲ್ಲಿ ನಿಂಗಪ್ಪ ಹೇಳಿದ ಆ ಮಾತು ಅನುಮಾನ ಹುಟ್ಟಿಸಿದೆ. ನನಗೆ ರಮೇಶ ಕುಂಬಾರ ಹೊಡೆದಿದ್ದಾರೆ ಎಂದು ಹೇಳಿದ್ನನಂತೆ ಈ ಕುರಿತು ಸ್ವತಃ ಆಂಬುಲೆನ್ಸ್ ಸಿಬ್ಬಂದಿ ಕೂಡ ಹೇಳಿದ್ದಾರೆ.
ಪತಿಯ ಸಾವಿನ ಕುರಿತು ಪತ್ನಿ ರೇಷ್ಮಾ ಅನುಮಾನ ವ್ಯಕ್ತಪಡಿಸಿದ್ದು ನನ್ನ ಗಂಡನ ಸಾವಿನ ಬಗ್ಗೆ ನನಗೆ ಅನುಮಾನವಿದೆ ಸಾಯುವ ಮುನ್ನ ನನ್ನ ಗಂಡ ನನಗೆ ಹೇಳಿದ್ದು “ನನ್ನನ್ನ ಹೊಡೆದು ಸಾಯಿಸಿದ್ದಾರೆ ಅಂತಾ” ಈ ಕುರಿತು ಪೊಲೀಸ್ ರು ತನಿಖೆ ಕೈಗೊಂಡು ನನ್ನ ಪತಿಯ ಸಾವಿಗೆ ನ್ಯಾಯ ಕೊಡಿ ಎಂದು ಮೃತನ ಪತ್ನಿ ರೇಷ್ಮಾ ಮನವಿ ಮಾಡಿದ್ದಾಳೆ.
ಇದು ಅಪಘಾತವಲ್ಲ ಕೊಲೆ;ಪತಿ ಸಾವಿಗೆ ಪತ್ನಿ ಶಂಕೆ
