ಉ.ಕ ಸುದ್ದಿಜಾಲ ಬೆಳಗಾವಿ :
ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿ ಇರುವ ಕಿತವಾಡ ಫಾಲ್ಸ್‌ಗೆ ಬೆಳಗಾವಿಯಿಂದ ಟ್ರಿಪ್‌ಗೆ ತೆರಳಿದ್ದ 40 ಯುವತಿಯರು ಈ ವೇಳೆ ಸೆಲ್ಫಿ ಫೋಟೋ ತಗೆದುಕೊಳ್ಳುವ ವೇಳೆ ಕಾಲು ಜಾರಿ ಬಿದ್ದ ಐವರು ಯುವತಿಯರು ಐವರು ಯುವತಿಯರ ಪೈಕಿ ನಾಲ್ವರ ಸಾವನಪ್ಪಿದ್ದಾರೆ. ಓರ್ವಳ ಸ್ಥಿತಿ ಗಂಭೀರವಾಗಿದೆ.
ಸಾವನಪ್ಪಿದ ಯುವತಿಯರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಝಟ್‌ಪಟ್ ಕಾಲೋನಿಯ ರುಕ್ಕಶಾರ್ ಭಿಸ್ತಿ (20), ತಸ್ಮಿಯಾ (20)ಉಜ್ವಲ್ ನಗರ ಆಸೀಯಾ ಮುಜಾವರ್ (17) ಹಾಗೂ ಅನಗೋಳದ ಕುದ್‌ಶೀಯಾ ಹಾಸ್‌ಂ ಪಟೇಲ್ (20) ಸಾವನಪ್ಪಿರುವ ದುರ್ದೈವಿಗಳು.
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಇರುವ ಯುವತಿಯರ ಮೃತದೇಹ, ಬೆಳಗಾವಿ ಬಿಮ್ಸ್ ಆಸ್ಪತ್ರೆ ಎದುರು ಜಮಾಗೊಳ್ಳುತ್ತಿರುವ ಮೃತ ಯುವತಿಯರ ಸಂಬಂಧಿಕರು ಬಿಮ್ಸ್ ಆಸ್ಪತ್ರೆ ಬಳಿ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಾಲ್ಕು ಜನ ಯುವತಿಯರ ಶವಗಳಿಗೆ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ಮಾಡಲಾಗಿದೆ.