ಉ.ಕ ಸುದ್ದಿಜಾಲ ಮಹಾರಾಷ್ಟ್ರ :
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಕನ್ನಡಾಭಿಮಾನ ಕನ್ನಡ ಬಾವುಟ ಹಿಡಿದು ಜೈ ಕನ್ನಡ ಎಂದು ಘೋಷಣೆ ಕೂಗುವುದರ ಮೂಲಕ ಕನ್ನಡ ಅಭಿಮಾನ ವ್ಯಕ್ತ ಪಡಿಸಿದ ಮರಾಠಿಗರು.
ಹೊಸ ಇತಿಹಾಸ ಬರೆದ ಮಹಾರಾಷ್ಟ್ರ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ತಿಕ್ಕುಂಡಿ ಗ್ರಾಮಸ್ಥರು. ಗ್ರಾಮದ ಮುಖ್ಯ ದ್ವಾರಕ್ಕೆ ಕನ್ನಡ ಬಾವುಟ ಕಟ್ಟಿ ಕನ್ನಡಾಭಿಮಾನ ಪ್ರದರ್ಶನ. ಮಹಾರಾಷ್ಟ್ರ ಜನರಿಂದಲೇ ಕನ್ನಡ ಬಾವುಟ ಪ್ರದರ್ಶನ.
ಬೈಕುಗಳಿಗೆ ಕನ್ನಡ ಬಾವುಟ ಕಟ್ಟಿ ಕನ್ನಡ ಅಭಿಮಾನ, ಜೈ ಕರ್ನಾಟಕ ಎಂದು ಜೈ ಘೋಷಣೆ ಕೂಗಿದ ಮರಾಠಿ ಕನ್ನಡಿಗರು. ಮಹಾರಾಷ್ಟ್ರ ಸರ್ಕಾರಕ್ಕೆ ಸವಾಲು ಹಾಕಿದ ಮರಾಠಿ ಕನ್ನಡಿಗರು
ಮಹಾರಾಷ್ಟ್ರ ಸರ್ಕಾರಕ್ಕೆ ಮರಾಠಿಯಲ್ಲಿ ಮೂಲಭೂತ ಸೌಕರ್ಯ ಕೊಡಿ ಎಂದು ಬೇಡಿಕೆ. ಮುಖ್ಯವಾಗಿ ನೀರಾವರಿ ಯೋಜನೆಗಳನ್ನು ರೂಪಿಸುವಂತೆ ಆಗ್ರಹ. ಒಂದು ವೇಳೆ ಕೊಡದಿದ್ದರೆ ನಾವು ಕರ್ನಾಟಕಕ್ಕೆ ಸೇರಿಕೊಳ್ಳುತ್ತೇವೆ ಎಂದು ಎಚ್ಚರಿಕೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕರ್ನಾಟಕ ಸೇರುವ ಉತ್ಸುಕತೆ. ಮಾರಾಠಿ ಪುಂಡರಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಪ್ರತ್ಯುತ್ತರ ನೀಡುತ್ತಿರುವ ಮಹಾ ಕನ್ನಡಿಗರು.
ಮಹಾರಾಷ್ಟ್ರ ಜನರಿಂದಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆ ನಮ್ಮ ಬಗ್ಗೆ ಕರ್ನಾಟಕ ಸಿಎಂಗೆ ಕಾಳಜಿ ಇದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.