ಉ.ಕ ಸುದ್ದಿಜಾಲ ಮಹಾರಾಷ್ಟ್ರ : 

ಕರ್ನಾಟಕದ ಹೊಸ ನಕ್ಷೆ ತಯಾರಿಸಿದ ಮಹಾರಾಷ್ಟ್ರದ ಕನ್ನಡಿಗರು. ಕರ್ನಾಟಕಕ್ಕೆ ಸೇರಲು ಉತ್ಸುಕರಾಗಿರುವ ಮಹಾ ಕನ್ನಡಿಗರು. ಈಗಿರುವ ನಕ್ಷೆಗೆ ಮಹಾರಾಷ್ಟ್ರದ ಕೆಲ ಜಿಲ್ಲೆಗಳನ್ನು ಸೇರಿಸಿ ಹೊಸ ನಕ್ಷೆ ತಯಾರು.

ಗಡಿಭಾಗದಲ್ಲಿ ವೈರಲ್ ಆಗುತ್ತಿರುವ ಕರ್ನಾಟಕದ ಹೊಸ ನಕ್ಷೆ. ಬೆಳಗಾವಿ, ಕಾರವಾರ, ನಿಪ್ಪಾಣಿ ಬೇಕು ಎನ್ನುತ್ತಿರುವ ಮಹಾರಾಷ್ಟ್ರಕ್ಕೆ ಮಹಾರಾಷ್ಟ್ರದ ಕನ್ನಡಿಗರಿಂದಲೇ ಪ್ರತ್ಯುತ್ತರ. ಮೊದಲು ಮಹಾರಾಷ್ಟ್ರದ ಜತ್ತ ತಾಲೂಕಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಕುರಿತು ಮಾತನಾಡಿ ಎಂದು ಪ್ರತ್ಯುತ್ತರ.

ಇಮೇಲ್ ಮೂಲಕ ಕರ್ನಾಟಕಕ್ಕೆ ಸೇರಲು ಅಭಿಯಾನ ಶುರು ಮಾಡಿದ ಜತ್ತ ತಾಲೂಕಿನ ಗಡಿ ಕನ್ನಡಿಗರು. ಮಹಾರಾಷ್ಟ್ರದ ಜತ್ತ ತಾಲೂಕಿನ ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ. ಜತ್ತ ತಾಲೂಕಿನ ನಿವಾಸಿ ಮಹಾದೇವ ಅಂಕಲಗಿ ಅವರಿಂದ ಸಿಎಂ ಬೊಮ್ಮಾಯಿಗೆ ಮನವಿ

ಸಿಎಂ ಹೇಳಿಕೆಗೆ ಮಹಾರಾಷ್ಟ್ರದ ಕನ್ನಡಿಗರಿಂದ ಸ್ವಾಗತ. ಬೊಮ್ಮಾಯಿ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಹಾರಾಷ್ಟ್ರ ಕನ್ನಡಿಗರಿಂದ ಬೆಂಬಲ.‌ ಮುಖ್ಯಮಂತ್ರಿಗಳ ಸರ್ಕಾರಿ ಅಧಿಕೃತ ಇಮೇಲ್ ಗೆ ಗಡಿ ಕನ್ನಡಿಗರನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಸಂದೇಶ ಕಳುಹಿಸಿದ ಗಡಿ ಕನ್ನಡಿಗರು.

ನಾವೂ ಕರ್ನಾಟಕ್ಕೆ ಹೋಗಲು ಸಿದ್ದ ಎನ್ನುತ್ತಿರುವ ಜತ್ತ ತಾಲೂಕಿನ‌ ಜನತೆ

ಮಹಾರಾಷ್ಟ್ರ ರಾಜ್ಯದಿಂದ ನಮಗೆ ಯಾವುದೇ ರೀತಿ ಪ್ರಯೋಜನವಾಗಿಲ್ಲ. ಕನ್ನಡ ಮಾತನಾಡುತ್ತೇವೆ ಎಂಬ ಕಾರಣಕ್ಕೆ ಮಹಾರಾಷ್ಟ್ರದ ಅಧಿಕಾರಿಗಳಿಂದ ನಮ್ಮ ಮೇಲೆ ದೌರ್ಜನ್ಯ ಆಗ್ತಿದೆ. ಮರಾಠಿ ಗೊತ್ತಿಲ್ಲದ ರೈತ,  ಸರಕಾರಿ ಕಚೇರಿಗೆ ಹೋದರೆ! “ಕಾನಡಿ ಚಾಲತ್ ನಾಹೀ, ಚಲ್ ಬಾಹರ್” ಎನ್ನುತ್ತಾರೆ.

ಅವಮಾನಿಸುವ ಮರಾಠಿ ಅಧಿಕಾರಿಗಳು ಕೂಡ ದೊಡ್ಡ ಸಮಸ್ಯೆ. ಆದರೆ ಕರ್ನಾಟಕದಲ್ಲಿ ಎಲ್ಲಾ ಭಾಷಿಕರಿಗೂ ಮರ್ಯಾದೆ ಸಿಗುತ್ತದೆ. ಎಂದು ಸಂದೇಶ ರವಾನೆ. ಮಹಾರಾಷ್ಟ್ರದಲ್ಲಿ  ಕನ್ನಡ ಭಾಷಿಕರ ಮೇಲೆ ದೌರ್ಜನ್ಯ ಕುರಿತು ಚರ್ಚೆ ನಡೆಸುತ್ತಿದ್ದಾರೆ

ಮಹಾರಾಷ್ಟ್ರ ಗಡಿ ಕನ್ನಡಿಗರು ಮಹಾರಾಷ್ಟ್ರದಲ್ಲಿರೋ ಕನ್ನಡಿಗರಿಂದ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಪ್ರೇಮ. ಮಹಾರಾಷ್ಟ್ರ ನಮ್ಮ ಅಸ್ಮಿತೆ ಎಂದು ಬೊಬ್ಬೆ ಹೊಡೆಯುವ ಮರಾಠಿ ಪುಂಡರಿಗೆ ಅಲ್ಲಿನ ಕನ್ನಡಿಗರಿಂದಲೇ ಪಾಠ. ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಇಮೇಲ್‌ ಸಂದೇಶದ ಮೂಲಕ ಅಭಿಯಾನ ಶುರು ಮಾಡಿದ ಗಡಿ ಕನ್ನಡಿಗರು.

ಕನ್ನಡ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯದ ಕುರಿತು ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಸಂದೇಶಗಳನ್ನ ಕಳಿಸುತ್ತಿರುವ ಗಡಿ ಕನ್ನಡಿಗರು.

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆ. ಕರ್ನಾಟಕದ ಹೊಸ ನಕ್ಷೆ ತಯಾರಿಸಿದ ಮಹಾರಾಷ್ಟ್ರದ ಕನ್ನಡಿಗರು. ಕರ್ನಾಟಕಕ್ಕೆ ಸೇರಲು ಉತ್ಸುಕರಾಗಿರುವ ಮಹಾ ಕನ್ನಡಿಗರು. ಈಗಿರುವ ನಕ್ಷೆಗೆ ಮಹಾರಾಷ್ಟ್ರದ ಕೆಲ ಜಿಲ್ಲೆಗಳನ್ನು ಸೇರಿಸಿ ಹೊಸ ನಕ್ಷೆ ತಯಾರು. ಗಡಿಭಾಗದಲ್ಲಿ ವೈರಲ್ ಆಗುತ್ತಿರುವ ಕರ್ನಾಟಕದ ಹೊಸ ನಕ್ಷೆ.