ಉ.ಕ ಸುದ್ದಿಜಾಲ ಮಹಾರಾಷ್ಟ್ರ :
ಕರ್ನಾಟಕ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಗಡಿ ವಿಚಾರದಲ್ಲಿ ಮತ್ತೆ ಮಹಾರಾಷ್ಟ್ರ ಕ್ಯಾತೆ ತೆಗೆದಿದೆ. ನಾಡದ್ರೋಹಿ ಎಂಇಎಸ್ ಸದಸ್ಯರ ಜೊತೆ ಮಹಾರಾಷ್ಟ್ರದ ಗಡಿ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿದ್ದಾರೆ.
ನಿನ್ನೆ ಮಹಾರಾಷ್ಟ್ರದ ಮುಂಬೈನಲ್ಲಿ ಎಂಇಎಸ್ ಸದಸ್ಯರ ಜೊತೆ ಸಭೆ ನಡೆಸಿದ ಮಹಾರಾಷ್ಟ್ರದ ಗಡಿ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷ, ಸಂಸದ ಧೈರ್ಯಶೀಲ ಮಾನೆ ಮಹಾರಾಷ್ಟ್ರದ ಗಡಿ ಭಾಗದ 865 ಹಳ್ಳಿಗಳ ಮರಾಠಿ ಭಾಷಿಕರಿಗೆ ಆರೋಗ್ಯ ವಿಮೆ ಯೋಜನೆ ವಿಚಾರ ಯೋಜನೆ ಲಾಭ ಪಡೆಯಲು ನಾಡದ್ರೋಹಿ ಎಂಇಎಸ್ ಕಚೇರಿಯ ಪತ್ರ ಅವಶ್ಯಕ.
ಯೋಜನೆಯ ಲಾಭ ಪಡೆಯಲು ಮರಾಠಿ ಭಾಷಿಕ ಎಂದು ನಮೂದಿಸೋದು ಕಡ್ಡಾಯ. ಮರಾಠಿ ಭಾಷಿಕ ಎಂದು ನಮೂದು ಜೊತೆ ಎಂಇಎಸ್ ಕಚೇರಿಯ ಪತ್ರವೂ ಕಡ್ಡಾಯ. ಗಡಿ ಪ್ರದೇಶದ ಮರಾಠಿ ಭಾಷಿಕರಿಗಾಗಿ ಗಡಿಭಾಗದಲ್ಲಿ ಪ್ರತ್ಯೇಕ ಕಚೇರಿ ಸ್ಥಾಪನೆಗೂ ನಿರ್ಧಾರ. ಪ್ರಾದೇಶಿಕ ಆಯುಕ್ತ ಶ್ರೇಣಿಯ ಅಧಿಕಾರಿ ನೇಮಿಸಿ ಕಚೇರಿ ಸ್ಥಾಪನೆಗೆ ನಿರ್ಧಾರ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಂದಗಡ್‌ನಲ್ಲಿ ಕಚೇರಿ ಸ್ಥಾಪನೆಗೆ ನಿರ್ಧಾರ ಈ ಮೂಲಕ ಗಡಿ ಭಾಗದಲ್ಲಿ ಭಾಷಾ ವೈಷಮ್ಯದ ಕಿಡಿ ಹೊತ್ತಿಸಲು ಎಂಇಎಸ್, ಮಹಾರಾಷ್ಟ್ರ ಸರ್ಕಾರ ಕುತಂತ್ರ ಕರ್ನಾಟಕದ 865 ಹಳ್ಳಿಗಳ ಮರಾಠಿ ಭಾಷಿಕರಿಗಾಗಿ ಮಹಾತ್ಮ ಪುಲೆ ಜನಾರೋಗ್ಯ ಯೋಜನೆಯಡಿ ಐದು ಲಕ್ಷ ರೂ. ವೆಚ್ಚವರೆಗೆ ಆರೋಗ್ಯ ವಿಮೆ.
ಮಹಾರಾಷ್ಟ್ರ ಅಷ್ಟೇ ಅಲ್ಲ ಕರ್ನಾಟಕದ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸೌಲಭ್ಯ ಇರೋ ಯೋಜನೆ. ಯೋಜನೆ ಲಾಭಕ್ಕಾಗಿ ತಾವು ಮರಾಠಿ ಭಾಷಿಕರು ಅಂತಾ ಪ್ರಮಾಣ ಪತ್ರ ನೀಡುವುದು ಅತ್ಯಗತ್ಯ. ಈ ಪ್ರಮಾಣ ಪತ್ರ ಬಳಸಿ 865 ಹಳ್ಳಿಗಳಲ್ಲಿ ಅತಿಹೆಚ್ಚು ಮರಾಠಿ ಭಾಷಿಕರಿದ್ದಾರೆಂದು ಬಿಂಬಿಸಲು ಪ್ಲ್ಯಾನ್. ಇದೇ ದಾಖಲೆಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ಕುತಂತ್ರ ನಡೆಸಿದೆ.