ಉ.ಕ ಸುದ್ದಿಜಾಲ ಕೊಲ್ಲಾಪೂರ :
ಒಂದು ವರ್ಷ ಮಗು ಬೆಳಸಿದ ಹಾಗೆ ಬೆಳೆದ ಕಬಬು ಬೆಳೆಗಾರರಿಗೆ ಸರಿಯಾಗಿ ಮಹಾರಾಷ್ಟ್ರ ಸರ್ಕಾರ ಬೆಲೆ ನಿಗಧಿ ಮಾಡದ ಹಿನ್ನಲೆಯಲ್ಲಿ ಕಬ್ಬು ಬೆಳೆಗಾರರಿಂದ ತೀವ್ರಗೊಂಡ ಹೋರಾಟ.
ಕಳೆದ ವಾರವಷ್ಟೆ ಇನ್ನೂ ಕಬ್ಬಿನ ಬಿಲ್ ನಿಗಧಿ ಮಾಡದ ಹಿಙಲೆಯಲ್ಲಿ ಕೆಲ ಟ್ರ್ಯಾಕ್ಟರಗಳನ್ನ ಸುಟ್ಟಿದು ಮಾಗುವ ಮುನ್ನವೆ ಮತ್ತೆ ಕಬ್ಬು ತುಂಬಿದ ಟ್ರ್ಯಾಕ್ಟರ ಟ್ರ್ಯಾಲಿಗಳನ್ನ ನೆಲಕಿ ಉರಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಮಹಾರಾಷ್ಟ್ರದ ರೈತರು.
ಹೌದು ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯಲ್ಲಿ ತೀವ್ರಗೊಂಡ ಕಬ್ಬು ಬೆಳೆ ಹೋರಾಟ. ಕೊಲ್ಲಾಪೂರ ಶೇತಗರಿ ಸಂಘಟನೆ ಒಂದು ಟನ್ ಕಬ್ಬಿಗೆ 3,500 ಬೆಲೆ ನಿಗಧಿ ಮಾಡಬೇಕು. ಕಳೆದ ವರ್ಷ ಉಳಿದ ಕಬ್ಬಿನ ಬಿಲ್ 400 ನೀಡಬೇಕೆಂದು ಪಟ್ಟು ಹಿಡಿದ ಕಬ್ಬು ಬೆಳೆಗಾರರು.
ನಾವು ಬೆಳೆದ ಬೆಳೆಗೆ ನಾವು ಬಿಲ್ ಕೇಳುತ್ತಿದ್ದೇವೆ ಮೊದಲೇ ಬರಗಾಲ ಒಂದು ಎಕರೆ ಕಬ್ಬು ಬೆಳೆಯಲು ಸುಮಾರು 25 ರಿಂದ 30 ಸಾವಿರ ಖರ್ಚಾಗುತ್ತೆ. ಹೀಗಾಗಿ ನಮ್ಮಗೆ ಪ್ರತಿ ಟನ್ ಕಬ್ಬಿಗೆ 3,5000 ನೀಡಲೆಬೇಕೆಂದು ಪಟ್ಟು ಹಿಡಿದ ಕಬ್ಬು ಬೆಳೆಗಾರರು.
ಕಳೆದ ಒಂದು ವಾರದಿಂದ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲೂ ಪ್ರತಿಭಟನೆಗಳು ತೀವ್ರ ಮಟ್ಟಕ್ಕೆ ತಲುಪಿವೆ.