ಉ.ಕ ಸುದ್ದಿಜಾಲ ಮೈಸೂರು :

ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವುದು ಖಚಿತ. ಹಾಗಾಗಿ ವರುಣಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನಮ್ಮ ತಂದೆಯವರು ಈಗಾಗಲೇ ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ. ಅವರ ಸ್ಪರ್ಧೆ ಕೋಲಾರದಿಂದ ಖಚಿತ, ವರುಣಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತೇನೆ ಎಂದರು.

ವರುಣಾ ಕ್ಷೇತ್ರ ಯಾವಾಗಲು ಸಹ ಕಾಂಗ್ರೆಸ್ ಭದ್ರಕೋಟೆ. ವರುಣಾ ಕ್ಷೇತ್ರ ರಚನೆ ಆದಾಗಿನಿಂದಲೂ ಇಲ್ಲಿ ಕಾಂಗ್ರೆಸ್ ಪಕ್ಷವೇ ಗೆದ್ದಿರೋದು. ಬಿಜೆಪಿಯಿಂದ ಯಾರೇ ಬಂದರೂ ನಮಗೆ ಭಯವಿಲ್ಲ.

ಎಲ್ಲರೂ ಸಹ ಗೆಲ್ಲಬೇಕೆಂದು ಸ್ಟಾಟರ್ಜಿ ಮಾಡ್ತಾರೆ. ಅಂತಿಮವಾಗಿ ವರುಣಾ ಕ್ಷೇತ್ರದಲ್ಲಿ ನಾವೇ ಗೆಲ್ಲೋದು ಎಂದು ಯತೀಂದ್ರ ಹೇಳಿದರು.