ಉ.ಕ ಸುದ್ದಿಜಾಲ ಕೊಲ್ಲಾಪೂರ :

ಬೆಳಗಾವಿಯಲ್ಲಿ ಕನ್ನಡ ಬೋರ್ಡ್‌ಗಳ ಕಡ್ಡಾಯ ಹಿನ್ನೆಲೆ. ಗಡಿಯಲ್ಲಿ ಮತ್ತೆ ಖ್ಯಾತೆ ತೆಗೆದ ಶಿವಸೇನೆಯ ಕ್ರಿಮಿಗಳು. ಕನ್ನಡ ನಾಮಫಲಕಕ್ಕೆ ಬೆಂಕಿ ಇಡುವುದರ ಮೂಲಕ ಗಡಿಯಲ್ಲಿ ಕ್ಯಾತೆ.

ಬೆಳಗಾವಿ ನಗರದಲ್ಲಿ ಕಡ್ಡಾಯ ಶೇ60 ರಷ್ಟು ಕನ್ನಡ ಬೋರ್ಡ್ ಅಳವಡಿಸುವಂತೆ ಪಾಲಿಕೆ ಆದೇಶ ಹಿನ್ನಲೆ ಪಾಲಿಕೆ ಹಾಗೂ ಸರ್ಕಾರದ ಆದೇಶದ ವಿರುದ್ದ ಗಡಿಯಲ್ಲಿ ಪುಂಡರ ಕ್ಯಾತೆ.

ಮಹಾರಾಷ್ಟ್ರದ- ಕರ್ನಾಟಕ ಗಡಿಯ ಕೊಲ್ಲಾಪುರ ಜಿಲ್ಲೆಯ ಕನ್ನೇರಿಯಲ್ಲಿ ಕನ್ನಡ ಬೋರ್ಡ್ ಗೆ ಬೆಂಕಿ. ಕನ್ನೇರಿ ಮಠದಲ್ಲಿ ಹಾಕಿದ್ದ ಕನ್ನಡ ಬೋರ್ಡ್ ಗಳನ್ನ ಹರಿದು ಬೆಂಕಿ ಹಚ್ಚಿದ ಶಿವಸೇನೆ ಹಾಗೂ ಎಮ್.ಎನ್.ಎಸ್ ಕಾರ್ಯಕರ್ತರು. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ನೇರಿ ಗ್ರಾಮ.

ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಕನ್ನೇರಿ ಮಠ. ಕರ್ನಾಟಕದ ಅತಿ ಹೆಚ್ಚು ಭಕ್ತರು ಹೊಂದಿರುವ ಕನ್ನೇರಿ ಮಠ. ಕರ್ನಾಟಕದಲ್ಲಿ ಮರಾಠಿ ಬೋರ್ಡ್ಗೆ ಅವಕಾಶ ಇಲ್ಲದೆ ಹೋದ್ರೆ ಮಹಾರಾಷ್ಟ್ರದಲ್ಲಿ ಕನ್ನಡ ಬೋರ್ಡ್ ಗಳಿಗೂ ಅವಕಾಶ ಇಲ್ಲ ಎಂದು ಪುಂಡಾಟಿಕೆ.