ಉ.ಕ ಸುದ್ದಿಜಾಲ ಧಾರವಾಡ :

ಧಾರವಾಡದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಪ್ರಸೂತಿ ತಜ್ಞೆಗೆ 11.10 ಲಕ್ಷ ರೂ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಧಾರವಾಡ ನಗರದ ಪ್ರಶಾಂತ ನರ್ಸಿಂಗ್ ಹೋಮ್ ನ ಪ್ರಸೂತಿ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ಗೆ ದಂಡ ಹಾಕಿರುವ ಆಯೋಗ

ಕಳೆದ 2018 ರಲ್ಲಿ ಧಾರವಾಡ ಭಾವಿಕಟ್ಟಿ ಪ್ಲಾಟ್ ನ ಗರ್ಭಿಣಿ‌ ಮಹಿಳೆ ಪ್ರೀತಿ ಎಂಬುವವರು ಪ್ರಶಾಂತ ಆಸ್ಪತ್ರೆಯಲ್ಲಿ ಗರ್ಭದ ಸ್ಕ್ಯಾನಿಂಗ್ ಮಾಡಿಸಿದ್ದರು. ಈ ವೇಳೆ ಡಾ.ಸೌಭಾಗ್ಯ ಕುಲಕರ್ಣಿ ಪ್ರೀತಿ ಹೊಟ್ಟೆಯಲ್ಲಿರುವ ಮಗು ಆರೋಗ್ಯವಾಗಿದೆ ಎಂದು ಹೇಳಿದ್ದರು. ಆದರೆ, ಬೇರೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದಾಗ ಹೆಣ್ಣು ಮಗು ಹುಟ್ಟಿತ್ತು.

ಆ ಮಗುವಿನ ಎರಡು ಕಾಲುಗಳು ಅಂಗವಿಕಲತೆಯಿಂದ ಕೂಡಿದ್ದವು. ಮಗುಗೆ ಅಂಗವೈಕಲ್ಯ ಇದೆ ಎಂದು ಡಾ. ಸೌಭಾಗ್ಯ ಕುಲಕರ್ಣಿ ಅವರಿಗೆ ಗೊತ್ತಿದ್ದರೂ ಅದನ್ನ ಮುಚ್ಚಿ ಹಾಕಿದ್ದರು. ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿದಾಗ ಮಗು ಕಾಲು ಸರಿ ಇಲ್ಲ ಎಂಬ ಬಗ್ಗೆ ಪೋಷಕರಿಗೆ ಸರಿಯಾದ ಮಾಹಿತಿ ನೀಡಿರಲಿಲ್ಲ

ಈ ಹಿನ್ನೆಲೆ ಮಗುವಿನ ತಾಯಿ ಪ್ರೀತಿ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಆಯೋಗಕ್ಕೆ ವೈದ್ಯರ ವಿರುದ್ಧ ನಿರ್ಲಕ್ಷ್ಯದ ದೂರು ನೀಡಿದ್ದರು. ದೂರನ್ನ ಕೂಲಂಕಷವಾಗಿ ಆಲಿಸಿದ ಗ್ರಾಹಕರ ಆಯೋಗ, ಮಗುವಿನ ತಾಯಿಗೆ ಮಗು ನಿರ್ವಹಣೆಗಾಗಿ 11.10 ಲಕ್ಷ ದಂಡ ಪರಿಹಾರ ನೀಡಲು ಆದೇಶ ನೀಡಿದ್ದಾರೆ.

ವೈದ್ಯಕೀಯ ಖರ್ಚು ಐವತ್ತು ಸಾವಿರ, ದೂರು ದಾರರ ಓಡಾಟದ ಖರ್ಚು ಐವತ್ತು ಸಾವಿರ, ಅಂಗವಿಕಲ ಹೆಣ್ಣು‌ ಮಗುವಿನ ವೈದ್ಯಕೀಯ ಖರ್ಚು ಮೂರು ಲಕ್ಷ, ಮಗುವಿನ ಜೀವನ ನಿರ್ವಹಣೆ ಭವಿಷ್ಯಕ್ಕಾಗಿ ಐದು ಲಕ್ಷ ಸೇರಿ ಒಟ್ಟು 11.10 ಲಕ್ಷ ದಂಡ ಲಕ್ಷ ಪರಿಹಾರ ನೀಡಲು ಆದೇಶ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಅವರಿಂದ ಆದೇಶ.