ಉ.ಕ ಸುದ್ದಿಜಾಲ ಬೀದರ :
ಬೀದರ್ ನಗರದಲ್ಲಿರುವ ಗುರುನಾನಕ್ ದೇವ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಜೈ ಶ್ರೀರಾಮ್ ಹಾಡಿನ ಕುರಿತಾಗಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದು ಹಿಂದೂ ವಿದ್ಯಾರ್ಥಿಗಳ ವಿರುದ್ದ ಪ್ರಕರಣ ದಾಖಲು ಖಂಡಿಸಿ, ಹಿಂದೂಪರ ಸಂಘಟನೆಗಳು, ಕಾಲೇಜು ವಿದ್ಯಾರ್ಥಿಗಳು ಹಾಗು ಬಿಜೆಪಿ ನಾಯಕರು ಬೃಹತ್ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದ್ರು.
ಪ್ರತಿಭಟನೆ ವೇಳೆ ಬಸವಕಲ್ಯಾಣ ಶಾಸಕ ಶರಣು ಸಲಗರ್ ಉತ್ತೇಜನಕಾರಿ ಭಾಷಣ ಮಾಡಿದ್ದು, ಪ್ರತಿ ಶನಿವಾರ ಕಾಲೇಜಿಗೆ ತೆರಳಬೇಕಾದ್ರೆ ಭಗವಾ ಧ್ವಜ ಹಾಕಿಕೊಂಡು ಹೋಗಿ, ಯಾರೂ ತಡೆಯುತ್ತಾರೋ ನಾನು ನೋಡ್ತೇನೆ ಅಂತಾ ಕರೆ ನೀಡಿದ್ರು.
ಹಿಂದೂ ವಿದ್ಯಾರ್ಥಿಗಳ ಮೇಲೆ ಎಪ್‌ಐಆರ್ ದಾಖಲು ಮಾಡಲು ಸಚಿವ ರಹೀಂ ಖಾನ್ ಅವರ ಮಗ ಇರ್ಷಾದ್ ಖಾನ್ ಅವರ ಕುಮ್ಮಕ್ಕು ಇದೆ. ಮುಂದಿನ ದಿನಗಳಲ್ಲಿ ಶಾಹೀನ್ ಕಾಲೇಜಿನಲ್ಲಿ ಶ್ರೀರಾಮನ ಭಜನೆ, ರಾಮನ ಹಾಡು ಹಾಡ್ತೇವೆ.
ಶಾಹೀನ್ ಕಾಲೇಜಿಗೆ ಕಾಲಿಡಬೇಕಾದ್ರೆ, ಜೈ ಶ್ರೀರಾಮ್ ಘೋಷಣೆ ಕೂಗಿ ಕಾಲಿಡಿ ಅಂತಾ ಕರೆ ನೀಡಿ, ಇರ್ಷಾದ್ ಖಾನ್, ಅವರಪ್ಪಾ ರಹೀಂ ಖಾನ್, ಇರ್ಷಾದ್ ಖಾನ್‌ರ ಮುತ್ಯಾ ಯಾರೇ ಬಂದ್ರು ಇದನ್ನ ತಡಿಯೋಕೆ ಆಗೊಲ್ಲಾ ಎಂದು ಸಚಿವ ರಹೀಂ ಖಾನ್ ಹಾಗೂ ಅವರ ಪುತ್ರನಿಗೆ ಎಚ್ಚರಿಕೆ ನೀಡಿದ ಬಸವಕಲ್ಯಾಣ ಶಾಸಕ ಶರಣು ಸಲಗಾರ.