ಉ.ಕ ಸುದ್ದಿಜಾಲ ತುಮಕೂರು :

ಮೂರು ಪಕ್ಷಗಳೂ ಗುತ್ತಿಗೆದಾರರಿಗೆ ಸಹಕರಿಸಲು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಯತ್ನ. ಮೇಕೆದಾಟು ಸುತ್ತಮುತ್ತಲ ಪ್ರದೇಶದಲ್ಲಿ ಅದ್ಭುತವಾದ ಅರಣ್ಯ ಪ್ರದೇಶವಿದೆ. ಆನೆ ಕಾರಿಡಾರ್ ಕೂಡಾ ಈ ಪ್ರದೇಶದಲ್ಲಿ ಹಾದು ಹೋಗುತ್ತದೆ ತುಮಕೂರಿನಲ್ಲಿ ಹೋರಾಟಗಾರ, ನಟ ಚೇತನ್ ಹೇಳಿಕೆ.

ಸುಮಾರು 9,000 ಕೋಟಿಯ ಮೇಕೆದಾಟು ಯೋಜನೆಗೆ ರಾಜಕೀಯ ಪಕ್ಷಗಳು ಮುಂದಾಗಿವೆ. ಕೊರೋನಾ ಸೋಂಕಿನ ನಿಯಮಾವಳಿಗಳನ್ನು ಗಾಳಿಗೆ ತೂರಿ ಪಾದಯಾತ್ರೆ ಮಾಡಲಾಗುತ್ತಿದೆ. ಇದು ಜನಸಾಮಾನ್ಯರ ಕಾಲಿನ ಯಾತ್ರೆ, ಮುಖಂಡರುಗಳು ಕಾರಿನ ಯಾತ್ರೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ.

ನಟ ಚೇತನ ಪ್ರತಿಕ್ರಿಯೆ

ಶೇಕಡಾ 40ರಷ್ಟು ಕುಡಿಯುವ ನೀರು ಪೋಲಾಗುತ್ತಿದೆ. ಮೊದಲು ಅದನ್ನು ಸರಿಪಡಿಸಬೇಕು. ಅದರ ಬದಲು 9000 ಕೋಟಿ ಯೋಜನೆ ಮಾಡಿ 12 ಸಾವಿರ ಎಕರೆ ಅರಣ್ಯ ಪ್ರದೇಶ ಮುಗಿಸಲಾಗುತ್ತಿದೆ. ಈ ಮೂಲಕ ಅನೇಕ ಗ್ರಾಮಗಳು ಅಲ್ಲಿ ಮುಳುಗಡೆಯಾಗಲಿವೆ.

9 ಸಾವಿರ ಕೋಟಿ ಯೋಜನೆ ಎಂದು ಹೇಳಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಅದು ದ್ವಿಗುಣ ಗೊಳ್ಳಲಿದೆ. ಮಳೆ ನೀರು ಸಂಗ್ರಹ ಹಾಗೂ ನಗರ ಪ್ರದೇಶದಲ್ಲಿ ನೀರು ಪೋಲಾಗುವುದನ್ನು ಮೊದಲು ನಿಯಂತ್ರಿಸಬೇಕು.ಬಆ ಮೂಲಕ ಪರಿಸರ ಸಂರಕ್ಷಣೆಯ ಮಾಡಬೇಕಿದೆ ಎಂದರು.