ಹಾವೇರಿ :
ಮೂರು ವರ್ಷದ ಗಂಡು ಮಗುವಿನ ಜೊತೆ ತಾಯಿ ನದಿಗೆ ಹಾರಿ ಆತ್ಮಹತ್ಯೆ ಮಾಡೊಕೊಂಡಿರುವ ಘಟನೆ ಹಾವೇರಿ ತಾಲೂಕಿನ ಗುಯಿಲುಗುಂದಿಯ ಆಣೆಕಟ್ಟು ಬಳಿ ನಡೆದಿದೆ.
ಶೃತಿ ತಿಮ್ಮಣ್ಣನವರ 25 ಹಾಗೂ ಮಗ ಅಮಿತ್ 3 ಸಾವನ್ನಪ್ಪಿದ ದುರ್ದೈವಿಗಳು. ಕಳೆದ ಎರಡು ದಿನಗಳ ಹಿಂದೆ ಮನೆಬಿಟ್ಟು ಹೋಗಿದ್ದ ತಾಯಿ ಮತ್ತು ಮಗು ಇಂದು ಶವವಾಗಿ ವರದಾ ನದಿಯ ಬಾಂದಾರು ಬಳಿ ಪತ್ತೆ. ಇದಕ್ಕೆ ಅವಳ ಗಂಡ ಹಾಗೂ ಮನೆಯವರೆ ಕಾರಣ ಎಂದೂ ದೂರು ನೀಡಿದ್ದು, ಮೃತಳ ತಂದೆ ನಿಂಗನಗೌಡ ಎಂಬಾತನಿಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಪತಿ ಮಂಜುನಾಥ್, ಸಣ್ಣಪ್ಪ, ಬಸವ್ವ ಹಾಗೂ ಗೀತಾ ಎಂಬುವವರ ಮೇಲೆ ಪ್ರಕರಣ ದಾಖಲು. ಮಂಜುನಾಥ್ ಮತ್ತು ಶೃತಿ ಪ್ರೀತಿಸಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ಅವಳ ಗಂಡನ ಜೊತೆ ಮನೆಯವರಿಂದ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗುತ್ತಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.