ಉ.ಕ‌ ಸುದ್ದಿಜಾಲ ಮಂಡ್ಯ :

ದಿನ ಬೆಳಗಾದರೆ ಸಾಕು ಮಾಧ್ಯಮಗಳಲ್ಲಿ ನಾವು ಅತ್ತೆ ಸೊಸೆ ಜಗಳ ಕೇಳರತ್ತೀವಿ ಇಲ್ಲಾ ಪಕ್ಕದಲ್ಲಿಯೇ ನೋಡಿರುತ್ತೆವೆ ಆದರೆ, ಇಲ್ಲಿ ಸೊಸೆ ಸಾವಿನ ಸುದ್ದಿ ಕೇಳಿ ಅತ್ತೆ ಹೃದಯಾಘಾತದಿಂದ ಸಾವುನಪ್ಪಿರುವ ಘಟನೆ  ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಅನಾರೋಗ್ಯದಿಂದ ಸುಶೀಲಾ (42) ವರ್ಷ ಸಾವನಪ್ಪಿದ ಸೊಸೆ. ಹುಚ್ಚಮ್ಮ(75) ವರ್ಷ ಸಾವನಪ್ಪಿದ ಅತ್ತೆ.

ಹುಚ್ಚಮ್ಮಗೆ ಐವರು ಗಂಡು ಮಕ್ಕಳು. ಹುಚ್ಚಮಗೆ ಎರಡನೇ ಮಗನ ಹೆಂಡತಿಯಾಗಿರುವ ಸುಶೀಲಾ. ಸುಶೀಲಾಗೆ ಇಬ್ಬರು ಮಕ್ಕಳು ಕೂಡ ಇದ್ದರು. ಅತ್ತೆ-ಸೊಸೆಯಂತೆ ಇರುವ ಬದಲು‌ ತಾಯಿ‌-ಮಗಳಂತೆ ಇದ್ದ ಹುಚ್ಚಮ್ಮ- ಸುಶೀಲಾ.

ನಿನ್ನೆ ಸಂಜೆ ಸುಶೀಲಾ ದಿಢೀರ್ ಸಾವುನಪ್ಪಿದ್ದು, ಸೊಸೆ ಸುಶೀಲಾ ಸಾವಿನ ಸುದ್ದಿ ಕೇಳಿ ಹುಚ್ಚಮ್ಮ ಸಾವು. ಅತ್ತೆ-ಸೊಸೆ ಸಾವಿನಿಂದ ಇಡೀ ಕುಟುಂಬ ಹಾಗೂ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.