ಉ.ಕ ಸುದ್ದಿಜಾಲ ಚಿಕ್ಕೋಡಿ :

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ಪೋಲಿಸರು ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಅಕ್ಷಯ ಅನೀಲ ಕಾಂಬಳೆ (25) ಯುವಕನನ್ನು బంధిసిದ ನಿಪ್ಪಾಣಿ ಶಹರ ಪೋಲಿಸರು.

ಅನಿಲ‌ಕಾಂಬಳೆ ಬಳಿ ಇದ್ದ 430 ಗ್ರಾಂ ಗಾಂಜಾ ಹಾಗೂ ಅಂದಾಜು 1.50 ಲಕ್ಷ ಮೌಲ್ಯದ ದ್ವಿಚಕ್ರ ವಾಹನ ಹೀಗೆ ಒಟ್ಟು 1.75 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಕೋಲ್ಲಾಪುರದಿಂದ ನಿಪ್ಪಾಣಿಗೆ ಯುವಕನೊಬ್ಬ ಗಾಂಜಾ ಮಾರಾಟ ಮಾಡಲು ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಆಧಾರದ ಮೇರೆಗೆ ಕಾರ್ಯ ಪ್ರವೃತ್ತರಾದ ಪೊಲೀಸರು ಬಸ್ ನಿಲ್ದಾಣ ಹತ್ತಿರದ ಗ್ರೀನ್ ಪಾರ್ಕ್ ಸಮೀಪ ಯುವಕನನ್ನು ಬಂಧಿಸಿದ್ದಾರೆ.

ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಳ್ಳಲಾಗಿದೆ.