ಉ.ಕ ಸುದ್ದಿಜಾಲ ಧಾರವಾಡ :

ಕಣ್ಣಿನ ತಪಾಸಣೆಗೆ ಜನರನ್ನು ಕರೆತರುತ್ತಿದ್ದ ವಾಹನ ಪಲ್ಟಿ. ಓರ್ವ ಸಾವು 9 ಜನರಿಗೆ ಗಾಯಗೊಂಡಿರುವ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಸಂಶಿ ಬಳಿ ನಡೆದಿದೆ.

ಟೆಂಪೋ ಪಲ್ಟಿಯಾಗಿ ಸ್ಥಳದಲ್ಲೆ 18 ವರ್ಷದ ಯುವಕ ಸಾವನಪ್ಪಿದ್ದಾನೆ. ಇನ್ನೂಳಿದ ಜನರಿಗೆ ಗಾಯಗೊಂಡಿದ್ದು, ಗಾಯಾಳುಗಳಿಗೆ ಕುಂದಗೋಳ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ನಿವಾಸಿ ಸಾವನಪ್ಪಿದ ಯುವಕ. ಹುಬ್ಬಳ್ಳಿಯ ಜಯ ಪ್ರಿಯಾ ಆಸ್ಪತ್ರೆಗೆ ಬರ್ತಿದ್ದ ವಾಹನ. ಉಚಿತ ಕಣ್ಣಿನ ತಪಾಸಣೆ ಹಿನ್ನಲೆ ಜನರನ್ನು ಆಸ್ಪತ್ರೆ ಕರೆ ತರುತ್ತಿದ್ದ ವಾಹನ.

ಸಂಶಿ ಬಳಿ ವಾಹನ ಪಲ್ಟಿಯಾಗಿ ದರ್ಶನ 18 ವರ್ಷದ ದರ್ಶನ ಸಾವು. ಗಾಯಾಳುಗಳಿಗೆ ಕುಂದಗೋಳ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.