ಉ.ಕ ಸುದ್ದಿಜಾಲ ಹುಕ್ಕೇರಿ :
ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಪಿಸ್ತೂಲ್ ತೋರಿಸಿ 75ಲಕ್ಷ ಎಗರಿಸಿದ ಖದೀಮರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಬಳಿ ಘಟನೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳಕ್ಕೆ ಹೊರಟ್ಟಿದ ಕಾರು. ಸಿನಿಮೀಯ ರೀತಿಯಲ್ಲಿ ಹಿಂಬಾಲಿಸಿ ಅಡ್ಡಗಟ್ಟಿದ ಖದೀಮರು. ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಇನೋವಾ ಕಾರು ಅಡ್ಡಗಟ್ಟಿ ಬಂದೂಕು ತೋರಿಸಿದ್ದಾರೆ.
ಕಾರು ಚಾಲಕ ಮತ್ತು ಚಿನ್ನದ ವ್ಯಾಪಾರಿ ಕೆಳಗಿಳಿಸಿದ್ದಾರೆ ಬಳಿಕ ವ್ಯಾಪಾರಿ ಕಾರು ಮತ್ತು 75 ಲಕ್ಷ ಹಣದ ಜೊತೆಗೆ ಪರಾರಿಯಾಗಿರುವ ಖದೀಮರು.
ಚಿನ್ನದ ವ್ಯಾಪಾರ ಮುಗಿಸಿ ಹಣದ ಜೊತೆಗೆ ಕೇರಳಕ್ಕೆ ಹೋರಟ್ಟಿದ್ದ ವ್ಯಾಪಾರಿ ಸೂರಜ್ ವನಮಾನೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.