ಉ.ಕ ಸುದ್ದಿಜಾಲ ವಿಜಯಪುರ :
ಸ್ಕಾರ್ಪಿಯೋ ಕಂಟೇಮರ್ ಹಾಗೂ ಖಾಸಗಿ ಬಸ್ (VRL) ಮಧ್ಯೆ ಅಪಘಾತ. ಘಟನಾ ಸ್ಥಳದಲ್ಲೇ ಆರು ಜನ ಸಾವು. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಬಳಿ ಎನ್ ಎಚ್ 50 ರಲ್ಲಿ ಘಟನೆ.
ಸ್ಕಾರ್ಪಿಯೋದಲ್ಲಿದ್ದ ನಾಲ್ವರು ಹಾಗೂ ಖಾಸಗಿ ಬಸ್ ನಲ್ಲಿದ್ದ ಒರ್ವ ಸ್ಥಳದಲ್ಲೇ ಸಾವು. ಮಹಿಂದ್ರ TUV 300 ಕಾರ್ ಚಾಲಕ ವಿಕಾಸ ಮಂಕನಿ ಸಾವು ಇತರರಿಗೆ ಗಾಯ…
ಸ್ಥಳಕ್ಕೆ ಮನಗೂಳಿ ಪೊಲೀಸರ ಭೇಟಿ ಪರಿಶೀಲನೆ. ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರೋ ಪೊಲೀಸರು. ಹೊರ್ತಿ ಕೆನರಾ ಬ್ಯಾಂಕ್ ಮ್ಯಾನೇಜರ್ ಭಾಸ್ಕರ್, ಪವಿತ್ರಾ, ಅಭಿರಾಮ್, ಜೋಶನಾ, ವಿಆರ್‌ಎಲ್ ಡ್ರೈವರ್ ಬಸವರಾಜ್ ರಾಠೋಡ್ ಸಾವು…
ಮಹೇಂದ್ರ ಕಾರಿನಲ್ಲಿದ್ದ 10 ವರ್ಷದ ಪ್ರವೀಣ ಬದುಕುಳಿದ ಬಾಲಕ. ಹೊರ್ತಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ ಭಾಸ್ಕರ್ ಕುಟುಂಬ ಸಾವು. ಕಳೆದ 15 ದಿನದ ಹಿಂದೆ ಹೊರ್ತಿಗೆ ಮ್ಯಾನೇಜರ್ ಆಗಿ ಬಂದಿದ್ದ ಭಾಸ್ಕರ್.. ತೆಲಂಗಾಣ,ರಾಜ್ಯದ ಮೂಲದ ಭಾಸ್ಕರ್……
ವಿಜಯಪುರ ಕಡೆಗೆ ಹೊರಟಿದ್ದ ಕಾರು. ವಿಜಯಪುರದಿಂದ ಬಳ್ಳಾರಿಗೆ ಹೊರಟ್ಟಿದ್ದ ವಿಆರ್ ಎಲ್ ಬಸ್. ಕಾರು ಬಸ್ ಗೆ ಡಿಕ್ಕಿ, ಬಸ್ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ… ಸ್ಥಳದಲ್ಲೇ ಆರು ಜನರು ಸಾವು ಅದೃಷ್ಟವಶಾತ್ ಓರ್ವ ಬಾಲಕ ಬಚಾವ್. ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…
ಸ್ಕಾರ್ಪಿಯೋ ಕಂಟೇಮರ್ ಹಾಗೂ ಖಾಸಗಿ ಬಸ್ (VRL) ಮಧ್ಯೆ ಅಪಘಾತ : ಆರು ಜನ ಸಾವು
