ಉ.ಕ ಸುದ್ದಿಜಾಲ ರಾಯಬಾಗ :

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಸ್ವಾಮೀಜಿ ಅಂದರ್ ಅಪ್ರಾಪ್ತ ಬಾಲಕಿ ಮೇಲೆ ಕಾಮುಕ ಸ್ವಾಮಿಜಿ ನಿರಂತರ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಕಳಿ ಗ್ರಾಮದ ಮಠದ ಒಂದರ ಲೋಕೇಶ್ವರ ಸ್ವಾಮಿಜಿ.

ಲೋಕೇಶ್ವರ ಸ್ವಾಮಿಜಿ ಮೇಲೆ ಅಪ್ರಾಪ್ತ ಬಾಲಕಿ ಗಂಭೀರ ಆರೋಪ. ಮೂಡಲಗಿ ತಾಲೂಕಿನ ಅಪ್ರಾಪ್ತ ಬಾಲಕಿ. ಲೋಕೇಶ್ವರ ಸ್ವಾಮಿಜೀ ಮೇಲೆ ಪೋಕ್ಸೋ ಪ್ರಕರಣ ದಾಖಲು. ಮನೆಗೆ ಹೊರಟ ಬಾಲಕಿಯನ್ನು ಕಾರಲ್ಲಿ ಕರೆದುಕೊಂಡ ಹೋದ ಸ್ವಾಮೀಜಿ. ಕುಟುಂಬಕ್ಕೆ ಪರಿಚಯಸ್ಥ ಸ್ವಾಮೀಜಿ ಎಂದು ಕಾರ ಹತ್ತಿದ ಬಾಲಕಿ.

ನಿಮ್ಮ ಮನೆಗೆ ಹೊಗುತ್ತಿದ್ದೇನೆ ಬಾ ಎಂದು ಹೇಳಿ ಕಾರು ಹತ್ತಿಸಿಕೊಂಡ ಕಾಮುಕ ಸ್ವಾಮೀಜಿ. ಮನೆ ಬಂದ್ರು ಕಾರ ನಿಲ್ಲಿಸದೇ ಬೆಳಗಾವಿ ಜಿಲ್ಲೆಯಿಂದ ಬಾಗಲಕೋಟ ಮೂಲಕ ರಾಯಚೂರಿನತ್ತ ಪ್ರಯಾಣ. ರಾಯಚೂರು ನಗರದ ಲಾಡ್ಜ್ ಒಂದರಲ್ಲಿ ನಿರಂತರ ಅತ್ಯಾಚಾರ ಎಸಗಿರುವ ಆರೋಪ. ರಾಯಚೂರು ಮತ್ತು ಬಾಗಲಕೋಟ ನಗರಗಳಲ್ಲಿ ಒತ್ತಾಯ ಪೂರ್ವಕ ಬಾಲಕಿ ಮೇಲೆ ಅತ್ಯಾಚಾರ.

ಅಲ್ಲಿಂದ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಾಲಕಿ ಬಿಟ್ಟು ಹೋದ ಸ್ವಾಮೀಜಿ. ಈ ವಿಷಯ ಯಾರಿಗೂ ಹೇಳಕೂಡದು ಹೇಳಿದ್ರೆ ನಿನ್ನನ್ನು ಜೀವಸಮೇತ ಉಳಿಸಲ್ಲ ಎಂದು ಬಾಲಕಿಗೆ ಬೆದರಿಕೆ. ಘಟನೆ ನೊಂದು ಬಾಲಕಿ ಕೊನೆಗೆ ಕುಟುಂಬಸ್ಥರಿಗೆ ಮಾಹಿತಿ.

ಕೂಡಲೇ ಬಾಲಕಿ ಪೋಷಕರು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಘಟನೆ ಮಾಹಿತಿ ಬೆನ್ನಟ್ಟಿದ ಪೊಲೀಸರು. ಪ್ರಕರಣ ದಾಖಲಾದ ಬೆನ್ನಲೆ‌ ಸ್ವಾಮೀಜಿಯನ್ನು ಬಂಧಿಸಿ ಜೈಲು ಸೇರಿಸಿದ ಪೋಲಿಸ್….

*ಫಸ್ಟ್ ಪಿಯು ವಿದ್ಯಾರ್ಥಿನಿಯನ್ನು ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಆರೋಪ ಬೆಳಗಾವಿಯ ಪ್ರಖ್ಯಾತ ಸ್ವಾಮೀಜಿ ವಿರುದ್ಧ ದಾಖಲಾಯ್ತು ಎಫ್ಐಆರ್. ರಾಮಮಂದಿರ ಮಠದ‌ ಲೋಕೇಶ್ವರ ಸ್ವಾಮೀಜಿ ವಿರುದ್ಧ ಮೂಡಲಗಿ ಠಾಣೆಯಲ್ಲಿ ಎಫ್ಐಆರ್. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮೇಕಳಿ‌ ಗ್ರಾಮದ ಮಠದ ಸ್ವಾಮೀಜಿ ವಿರುದ್ಧ ದೂರು.

ಸಂತ್ರಸ್ತೆ ಯುವತಿ ಹಾಗೂ ಆಕೆಯ ತಂದೆ ರಾಮಮಂದಿರ ಮಠದ ಲೋಕೇಶ್ವರ ಸ್ವಾಮೀಜಿ ಭಕ್ತರು. ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಠಕ್ಕೆ ಹೋಗ್ತಿದ್ದ ತಂದೆ-ಮಗಳು. ಮೇ‌ 13 ರಂದು ಕಾನಟ್ಟಿ ಗ್ರಾಮದ ಸೋದರ ಮಾವನ ಮನೆಗೆ ಹೋಗಿ ಬರುತ್ತಿದ್ದ ಯುವತಿ. ಅದೇ ದಿನ ಮರಳಿ‌ ತಮ್ಮೂರಿಗೆ ನಡೆದುಕೊಂಡು ಬರುತ್ತಿದ್ದ ಯುವತಿ.

ಅದೇ ವೇಳೆ ಮನೆಗೆ ಡ್ರಾಪ್ ಮಾಡ್ತಿನಿ ಬಾ ಎಂದು ಕರೆದಿರುವ ಲೋಕೇಶ್ವರ ಸ್ವಾಮೀಜಿ. ಮನೆ ಎದುರು ಯುವತಿಯನ್ನು ಇಳಿಸದೇ ರಾಯಚೂರಿನ ಲಾಡ್ಜ್‌ಗೆ ‌ಕರೆದೊಯ್ದ ಸ್ವಾಮೀಜಿ. ಮನೆ ಮುಂದೆ‌ ಕಾರು ನಿಲ್ಲಿಸುವಂತೆ ‌ಯುವತಿ ಕೇಳಿದರೂ ಬೆದರಿಕೆ ಹಾಕಿರುವ ಸ್ವಾಮೀಜಿ. ಬಳಿಕ ರಾಯಚೂರಿನ‌ ಲಾಡ್ಜ್‌ನಲ್ಲಿ ಎರಡು ದಿನಗಳ ಕಾಲ ಯುವತಿ ಮೇಲೆ ಅತ್ಯಾಚಾರ.

ವಿಭೂತಿ, ಧರ್ಮಗ್ರಂಥಗಳು ಇರಬೇಕಿದ್ರ ಮಠದಲ್ಲಿ ‌ಲಾಂಗು- ಮಚ್ಚು, ಸ್ವಾಮೀಜಿ ಬಂಧನವಾಗ್ತಿದ್ದಂತೆ‌ ಮಠಕ್ಕೆ ಭೇಟಿ ನೀಡಿ ಮೇಕಳಿ ಗ್ರಾಮಸ್ಥರ ಪರಿಶೀಲನೆ. ಆ ವೇಳೆ ಲೋಕೇಶ್ವರ ಸ್ವಾಮೀಜಿ ಮಠದಲ್ಲಿ ಲಾಂಗು, ಮಚ್ಚು, ಕೋಯ್ತಾ ಪತ್ತೆ, ಲೋಕೇಶ್ವರ ಸ್ವಾಮೀಜಿ ವಿರುದ್ಧ ಮೇಕಳಿ ಗ್ರಾಮದ ನಿವಾಸಿಗಳು ಗಂಭೀರ ಆರೋಪ.

ಸ್ವಾಮೀಜಿ ‌ಸ್ವಭಾವದ ಬಗ್ಗೆ ನಾವು ಹಲವು ಸಲ ಪೊಲೀಸರ ಗಮನಕ್ಕೆ ‌ತಂದಿದ್ದೇವೆ. ಬೇರೆ ಜಿಲ್ಲೆಗಳ ಜನರಿಗೆ ‌ಓಸಿ, ಮಟ್ಕಾ ನಂಬರ್ ಹೇಳುವ ಕೆಲಸವನ್ನು ‌ಸ್ವಾಮೀಜಿ ಮಾಡ್ತಿದ್ದಾರೆ. ಹಣದ ಆಸೆಗೆ ಬೇರೆ ಜಿಲ್ಲೆಯ ಜನರೇ ಈ ಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರ್ತಾರೆ. ಯಾವುದೇ ಕಾರಣಕ್ಕೂ ಸ್ವಾಮೀಜಿ ‌ಬಿಡುಗಡೆ ಆಗಬಾರದು. ಲೋಕೇಶ್ವರ ಸ್ವಾಮೀಜಿಯಿಂದ ನಮ್ಮ ಗ್ರಾಮದ ಹೆಸರೂ ಹಾಳಾಗ್ತಿದೆ ಎಂದು ಆಕ್ರೋಶ.