ಉ.ಕ ಸುದ್ದಿಜಾಲ ಕೊಡಗು :

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ಮೈತಾಡಿ ಗ್ರಾಮದಲ್ಲಿ ನಡೆದಿದೆ. ಶರತ್ ಫೂವಯ್ಯ (33) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ವಿರಾಜಪೇಟೆ ಪಟ್ಟಣದ ಹೊರವಲಯದಲ್ಲಿನ ಮೈತಾಡಿ ಮನೆಯ ಬಳಿಯೇ ಗುಂಡು ಹಾರಿಸಿಕೊಂಡಿರುವ ಶರತ್ ಪೂವಯ್ಯ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಡಬಲ್ ಬ್ಯಾರೆಲ್ ನಾಡ ಬಂದೂಕು ಬಳಸಿ ಆತ್ಮಹತ್ಯೆ ಸ್ಥಳಕ್ಕೆ ವಿರಾಜಪೇಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.