ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹುಂಡಿಯಲ್ಲಿ ಸಂಗ್ರಹವಾದ ನಗದು ಹಣ, ಚಿನ್ನಾಭರಣ ಎಣಿಕೆ, ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 70 ಲಕ್ಷ ದೇಣಿಗೆ ಸಂಗ್ರಹ. ಯಲ್ಲಮ್ಮನ ಹುಂಡಿಯಲ್ಲಿ ಹಣ, ಬೆಳ್ಳಿ ಆಭರಣದ ಎಣಿಕೆ ಕಾರ್ಯ ಮುಕ್ತಾಯ.

ಐದು ದಿನಗಳಿಂದ ನಡೆದಿದ್ದ ಎಣಿಕೆ ಕಾರ್ಯದಲ್ಲಿ ಒಟ್ಟು 65.70ಲಕ್ಷ ರೂ.ನಗದು, 4.13ಲಕ್ಷ ಮೌಲ್ಯದ ಚಿನ್ನಾಭರಣ, 1.14ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹ ಒಟ್ಟು ಯಲ್ಲಮ್ಮನ ಹುಂಡಿಯಲ್ಲಿ 70ಲಕ್ಷ ರೂ. ಸಂಗ್ರಹ, ಐದು ದಿನಗಳ ಎಣಿಕೆ ಕಾರ್ಯದಲ್ಲಿ ವಿದೇಶ ಕರೆನ್ಸಿ, ಚಿತ್ರವಿಚಿತ್ರ ಭಕ್ತರ ಪತ್ರಗಳು ಪತ್ತೆ. ದೇವಸ್ಥಾನದ ಅಧೀಕ್ಷಕ ಅರವಿಂದ್ ಯಾಳಗಿಯಿಂದ ಮಾಹಿತಿ.