ಉ.ಕ ಸುದ್ದಿಜಾಲ ಮೋಳೆ :
ಶಿಕ್ಷಣ ಎಂದರೆ ಹುಲಿಯ ಹಾಲಿದಂಗೆ ಹುಲಿಯ ಹಾಲನ್ನ ಕೂಡಿದು ಹುಲಿಯಂತೆ ಘರ್ಜನೆ ಮಾಡಿ, ಶಿಕ್ಷಣದಲ್ಲಿ ಫೇಲಾದರೆ ನಡೆಯುತ್ತೆ ಆದರೆ ಜೀವನದಲ್ಲಿ ಎಂದಿಗೂ ಫೇಲಾಗಬೇಡಿ ಎಂದು ಅಥಣಿ ತಾಲೂಕಿನ ಶೇಗುಣಸಿ ವಿರಕ್ತಮಠದ ಡಾ.ಮಹಾಂತಪ್ರಭು ಮಹಾಸ್ವಾಮಿ ಹೇಳಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಶ್ರೀ ಸಿದ್ದೇಶ್ವರ ಪ್ರಾಥಮಿಕ ಹಾಗುಜ ಪ್ರೌಢ ಶಾಲೆಯ 7 ಮತ್ತು 10 ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೊಡುವ ಹಾಗೂ ಸತ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಶ್ರೀಗಳು ಹಿತ ನುಡಿಗಳನಾಡಿದರು ಮಹತ್ಮ ಜೋತಿಬಾ ಪೊಲೆ ಪತ್ನಿ ಸಾವಿತ್ರಿಬಾಯಿ ಪುಲೆ ಅವರಿಗೆ ಇಂಗ್ಲೆಡ ರಾಣಿ ನಿನಗೆ ಏನ ಬೇಕು ಕೇಳು ಅಂದಾಗ ಸಾವಿತ್ರಿಬಾಯಿ ಪುಲೆ ನಮ್ಮಗೆ ಸ್ವಾತಂತ್ರ್ಯ ಬದಲು ನಮ್ಮಗೆ ಶಿಕ್ಷಣ ನೀಡಿ ಎಂದು ಕೇಳಿದರು. ತೊಟಿಲ ತೂಗುವ ಕೈ ಇಡೀ ದೇಶವನ್ನೆ ತೂಗುತ್ತೆ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ಯ ನೀಡಬೇಕು ಎಂದರು.
ಶಿಕ್ಷಣದಲ್ಲಿ ಫೆಲಾದರು ನಡೆಯುತ್ತೆ ಆದರೆ ಜೀವನದಲ್ಲಿ ಫೇಲ ಆಗಬೇಡಿ ಸಮಾಜದಲ್ಲಿ ಒಳ್ಳೆ ವ್ಯಕ್ತಿ ಆಗಲು ಶಿಕ್ಷಣ ಅವಶ್ಯಕತೆ ಇಲ್ಲ ಕಡಿಮೆ ಅಂಕ ಬಂದ ತಕ್ಷಣ ಜೀವನದಲ್ಲಿ ಜಿಗುಪ್ಸೆಗೊಳ್ಳಬೇಡಿ, ಶಿಕ್ಷಣ ಕಲಿತವರು ಭ್ರಷ್ಟರಾಗಬಹುದು ಆದರೆ ಸಂಸ್ಕಾರ ಕಲಿತವರು ಭ್ರಷ್ಟರಾಗಲು ಸಾಧ್ಯವಾಗಲು ಸಧ್ಯವಿಲ್ಲ, ವಸ್ತುವಿನಿಂದ ಮನುಷ್ಯನಿಗೆ ಬೆಲೆ ಬರೋದ ಮುಖ್ಯವಲ್ಲ ವ್ಯಕ್ತಿಗತವಾಗಿ ಬೆಲೆ ಬರೋದು ಮುಖ್ಯ ಸಮಯಕ್ಕೆ ಬೆಲೆ ಕೊಡುವುದು ಬಹಳ ಮುಖ್ಯ ಎಂದು ಮಕ್ಕಳನ್ನ ಉದ್ದೇಶಿಸಿ ಶ್ರೀಗಳು ಮಾತನಾಡಿದರು.
ಸತ್ಕಾರ ಮೂರ್ತಿಗಳಾಗಿ ಡಾ.ಅಶ್ವಿನಿ ಚಿದಾನಂದ ಸೋಂದಕರ ಅವರಿಗೆ ಸತ್ಕಾರ ಮಾಡಲಾಯಿತು, ಸತ್ಕಾರ ಬಳಿಕ ಮಾತನಾಡಿದ ಅವರು, ಪ್ರಯತ್ನ ಇರಲಿ ಆದರೆ, ಪ್ರಯತ್ನ ವಿಫಲವಾದಾಗ ಧೃತಗೆಡದೆ ಮುನುಗ್ಗಿ. ಡಾ.ಅಶ್ವಿನಿ ಅವರು ತಾವು ಕಲಿತ ಸಿದ್ದೇಶ್ವರ ಶಾಲೆಯಲ್ಲಿ ಕಲಿತಿರುವುದುದನ್ನ ಮೆಲಕು ಹಾಕಿದರು. ತಾವು ಕಲಿತ ಶಾಲೆಗೆ ಅಶ್ವಿನಿ ಸೊಂದಕರ ಅವರು 50 ಸಾವಿರ ಹಣ ದಾನದ ರೂಪದಲ್ಲಿ ನೀಡಿ ತಾವು ಕಲಿತ ಶಾಲೆಗೆ ಅನಕೂಲವಾಗಲಿ ಎಂದು ಹಾರೈಸಿದರು.
ಸುಮಾರು 60 ವರ್ಷಗಳಿಂಂದ ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ ನಡೆದು ಬಂದಿದ್ದು ಈ ವರೆಗೂ ಒಂದು ಕಪ್ಪು ಚುಕೆ ಬರದಂತೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದ್ದು ಹೆಮ್ಮೆ
ಈ ಕಾರ್ಯಕ್ರಮದದಲ್ಲಿ ಸಂಸ್ಥೆಯ ಕಾರ್ಯಧ್ಯಕ್ಷ ಶಿವಾನಂದ ಹೊಸಮನಿ, ನಿರ್ದೇಶಕರಾದ ಬಾಹುಬಲಿ ಟೋಪಗಿ, ಅವಣ್ಣಾ ಪಾಟೀಲ, ಗಜಾನನ ಯರಂಡೋಲಿ, ಈಶ್ವರ ವಾಂಡಿಮಾಳಿ, ಮಾಯಪ್ಪ ಮುಂಜೆ, ಸಿದರಾಯ ಹುಂಡೇಕರ, ವಿರೂಪಾಕ್ಷ, ಗೋರಖನಾಥ ಕೋಳೆಕರ, ಸಿದ್ದೇಶ್ವರ ಪ್ರೌಢ ಶಾಲೆ ಮುಖ್ಯಾಧ್ಯಪಕ ಶಿವಾನಂದ ಹವಳೆ, ಪ್ರಾಥಮಿಕ ವಿಭಾಗದ ಮುಖ್ಯಾಧ್ಯಾಪಕಿ ನಂದಶ್ರೀ ಬನಜವಾಡ ಉಪಸ್ಥಿತರಿದ್ದರು ಕಾರ್ಯಕ್ರಮ ನಿರೂಪಣೆಯನ್ನ ಎಲ್ ಟಿ ಬಬಲಿ ಹಾಗೂ ಕಾರ್ಯಕ್ರಮ ವಂದನಾರ್ಪಣೆಯನ್ನ ಪೂರ್ಣಿಮಾ ಅನನ್ನವರ ನೆರವೆರಿಸಿದರು.