ಉ.ಕ ಸುದ್ದಿಜಾಲ ಬೀದರ್ :
ಪ್ರೀತಿ ಮಾಡಿದ್ದಕ್ಕೆ ಮಗಳನ್ನೇ ಕೊಲೆಗೈದ ಪಾಪಿ ತಂದೆ. ಮಗಳ ಕೊಲೆ ಮಾಡಿ ಪರಾರಿಯಾದ ಆರೋಪಿ ತಂದೆ ಮೋತಿರಾಮ ಜಾಧವ್. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬರಗೇನ್ ತಾಂಡಾದಲ್ಲಿ ನಿನ್ನೆ ನಡೆದ ಘಟನೆ.
ಮೋನಿಕಾ ಮೋತಿರಾಮ ಜಾಧವ್ (18) ಕೊಲೆಯಾದ ದುರ್ದೈವಿ ಯುವತಿ. ಪ್ರೀತಿ-ಪ್ರೇಮದಿಂದ ದೂರವಿರುವಂತೆ ಮಗಳಿಗೆ ತಿಳುವಳಿಕೆ ಹೇಳಿದ್ದ ತಂದೆ. ನಿನಗೆ ಒಳ್ಳೆಯ ಹುಡುಗನನ್ನ ನೋಡಿ ಮದುವೆ ಮಾಡುತ್ತೇನೆ ಅಂತಾ ಹೇಳಿದ್ದ ತಂದೆ.
ಈ ವೇಳೆ ತಂದೆಯ ಎದುರು ಪ್ರೀತಿ ವಿಷಯ ಪ್ರಸ್ತಾಪಿಸಿದ್ದಕ್ಕೆ ಕುಪಿತಗೊಂಡಿದ್ದ ಮೋತಿರಾಮ್.ಬಪ್ರೀತಿಸಿದ ಯುವಕನನ್ನೆ ಮದುವೆ ಮದುವೆ ಆಗುತ್ತೇನೆ ಎಂದಿದ್ದಕ್ಕೆ ಕುಪಿತಗೊಂಡಿದ್ದ ಮೋತಿರಾಮ್. ಮನೆಯಲ್ಲಿ ಯಾರು ಇಲ್ಲದ ವೇಳೆ ಕುತ್ತಿಗೆಗೆ ಹಗ್ಗ ಬಿಗಿದು, ಕಟ್ಟಿಗೆಯಿಂದ ಮಾರಾಣಾಂತಿಕ ಹಲ್ಲೆ.
ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟ ಮೋನಿಕಾ ಜಾಧವ್. ಸಂತಪೂರ ಪೊಲೀಸ್ ಠಾಣೆಯಲ್ಲಿ ಮೃತ ಯುವತಿಯ ತಾಯಿ ಭಾಗುಬಾಯಿ ದೂರು ನೀಡಿದ್ದಾರೆ.
ಔರಾದ್ ತಾಲೂಕಿನ ಬರಗೇನ್ ತಾಂಡಾದಲ್ಲಿ ಹೆತ್ತ ಮಗಳನ್ನೆ ಹತ್ಯೆಗೈದ ಪಾಪಿ ತಂದೆ. ಒಂದೂವರೆ ತಿಂಗಳ ಹಿಂದೆ ಎರಡು ದಿನ ಮನೆ ಬಿಟ್ಟು ತೆರಳಿದ್ದ ಯುವತಿ. ಸಂತಪೂರ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ ಯುವತಿ ಕುಟುಂಬಸ್ಥರು.
ಪ್ರಕರಣ ದಾಖಲಾದ ಮೂರು ದಿನಗಳಲ್ಲಿ ಹೈದರಾಬಾದ್‌ನಲ್ಲಿ ಯುವತಿ ಪತ್ತೆ ಕುಟುಂಬಸ್ಥರಿಗೆ ಒಪ್ಪಿಸಿದ್ದ ಪೊಲೀಸರು. ಮನೆಯಲ್ಲಿ ಯುವತಿ ಮದುವೆ ವಿಚಾರಕ್ಕೆ ನಿತ್ಯ ಗಲಾಟೆ, ಬೇರೆ ಯುವಕನೊಂದಿಗೆ ಮದುವೆ ತಂದೆ ಪಟ್ಟು. ಬೇರೆ ಯುವಕನೊಂದಿಗೆ ಮದುವೆಗೆ ಒಪ್ಪದ ಮೃತ ಯುವತಿ ಮೋನಿಕಾ.
ಪಕ್ಕದ ಗ್ರಾಮದ ಅನ್ಯ ಜಾತಿಯ ಯುವಕನನ್ನ ಪ್ರೀತಿಸಿದ್ದ ಮೋನಿಕಾ. ಮನೆಯಲ್ಲಿ ತೋರಿಸಿದ ಯುವಕನನ್ನೆ ಮದುವೆ ಆಗುವಂತೆ ಆರೋಪಿ ತಂದೆಯಿಂದ ನಿತ್ಯ ಗಲಾಟೆ. ಮನೆಯಲ್ಲಿ ಯಾರು ಇರದ ವೇಳೆ ಯುವತಿ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕಟ್ಟಿಗೆಯಿಂದ ತಂದೆಯಿಂದಲೇ ಹಲ್ಲೆ.
ತೀವ್ರಗಾಯವಾಗಿ ಯುವತಿ ಮೋನಿಕಾ ಸ್ಥಳದಲ್ಲೇ ಸಾವು. ಯುವತಿ ತಾಯಿಯಿಂದ ದೂರು ಪ್ರಕರಣ ದಾಖಲು, ಆರೋಪಿ ತಂದೆಗಾಗಿ ಹುಡುಕಾಟ ನಡೆದಿದೆ.