ಉ.ಕ ಸುದ್ದಿಜಾಲ ರಾಯಬಾಗ :

ಬೆಳಗಾವಿಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ 5 ಜನರ ಸಾವು ಬೈಕ್ ಮತ್ತು ಕಾರ ನಡುವೆ ನಡೆದ ಭೀಕರ ರಸ್ತೆ ಅಪಘಾತ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸೇರಿದಂತೆ 5 ಜನರ ದುರ್ಮರಣ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಹೊರವಲಯದ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ಮೇಲೆ ನಡೆದ ಭೀಕರ ರಸ್ತೆ ಅಪಘಾತ. ಮೊದಲು ಬೈಕ್ ಸವಾರನಿಗೆ ಗುದ್ದಿ ಬಳಿಕ ಮರಕ್ಕೆ ಡಿಕ್ಕಿ ಹೊಡೆದಿರುವ ಕಾರು.

KA-03- AF-1009 ನಂಬರಿನ ಕಾರ ಅಪಘಾತ ಅಪಘಾತದ ತೀವ್ರತೆಗೆ ನುಜ್ಜುಗುಜ್ಜಾಗಿರುವ ಕಾರ ಸ್ಥಳಕ್ಕೆ ಹಾರೂಗೇರಿ ಪೊಲೀಸರ ಭೇಟಿ ಪರಿಶೀಲನೆ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು

ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು, ಮಲ್ಲಿಕಾರ್ಜುನ್ ಮರಾಠೆ (16 ) ,ಲಕ್ಷ್ಮೀ ಮರಾಠೆ( 19 )
ಆಕಾಶ ಮರಾಠೆ(14 ) ಮೂಡಲಗಿ ತಾಲೂಕಿನ ಗುರ್ಲಾಪುರ ನಿವಾಸಿಗಳು

ಕಾರ ಚಾಲಕ, ಶ್ರೀಕಾಂತ ಪಡತರಿ( 22 ) ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ನಿವಾಸಿ,

ಬೈಕ್ ಸವಾರ, ನಾಗಪ್ಪ ಯಡವನ್ನವರ್( 48 ) ರಾಯಬಾಗ ಮುಗಳಖೋಡ ಗ್ರಾಮದ ನಿವಾಸಿ

ಅತಿಯಾದ ವೇಗದಿಂದ ಎರಡು ಬೈಕ್ ಗಳಿಗೆ ಡಿಕ್ಕಿ  ಬಳಿಕ ಬೃಹತ್ ಮರಕ್ಕೆ ಡಿಕ್ಕಿ ಹೊಡೆದ ಕಾರು. ಇಬ್ಬರು ಬೈಕ್ ಸವಾರರಿಗೆ ಗಂಭೀರ ಗಾಯ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.