ಉ.ಕ ಸುದ್ದಿಜಾಲ ಬೆಳಗಾವಿ :
ಜೈಲಿಗೆ ಹೋಗಿ ಬಂದರೂ ಬುದ್ದಿ ಕಲಿಯದ ಎಂಇಎಸ್ ಪುಂಡ, ಜೈಲಿನಿಂದ ಹೊರ ಬಂದು ‘ಜೈ ಮಹಾರಾಷ್ಟ್ರ’ ಎಂದ ಶುಭಂ ಶೆಳ್ಕೆ ಭಾವನಾತ್ಮಕವಾಗಿ ಮರಾಠಿ ಭಾಷಿಕರ ಪ್ರಚೋದಿಸಲು ಶುಭಂ ಶೆಳ್ಕೆ ಯತ್ನ.
ಛತ್ರಪತಿ ಶಿವಾಜಿ ಮಹಾರಾಜರು ಶಬ್ದಕೋಶ ರಚಿಸಿದ ಮರಾಠಿ ಭಾಷೆ ರಕ್ಷಣೆಗೆ ಒಂದಾಗಿ ಎಂದು ವಿಡಿಯೋ ಹೇಳಿಕೆ ಬಿಡುಗಡೆ. ಕನ್ನಡಿಗರ ಕೆರಳಿಸಿ ಜೈಲು ಪಾಲಾಗಿದ್ದ ಎಂಇಎಸ್ ಮುಖಂಡ ಶುಭಂ ಶೆಳ್ಕೆ.
ಕನ್ನಡಿಗರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ನಿನ್ನೆ ಜೈಲುಪಾಲಾಗಿದ್ದ ಶುಭಂ ಶೆಳ್ಕೆ. ನಿನ್ನೆ ರಾತ್ರಿ ಜಾಮೀನಿನ ಮೇಲೆ ಬಿಡುಗಡೆಯಾದ ಶುಭಂ ಶೆಳ್ಕೆ ಮತ್ತೆ ಉದ್ಧಟತನ. ಎಂಇಎಸ್ ಕಾರ್ಯಕರ್ತರ ಮೇಲೆ ಕರ್ನಾಟಕ ಸರ್ಕಾರ ಮಾಡ್ತಿರುವ ದಬ್ಬಾಳಿಕೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ’.
ಮರಾಠಿ ಭಾಷೆಯ ಅಭಿಮಾನ ತೋರಿದ್ದ ಯುವಕನ ಸನ್ಮಾನಿಸಿದ್ದಕ್ಕೆ ನನ್ನ ಬಂಧಿಸಲಾಯಿತು. ಈ ರೀತಿ ಏಕಾಏಕಿ ಕಾರ್ಯಾಚರಣೆ ಮಾಡೋ ಅವಶ್ಯ ಜಿಲ್ಲಾಡಳಿತಕ್ಕೆ ಏನಿತ್ತು?. ನಮ್ಮ ಚಳವಳಿಯಲ್ಲಿ ಇಂತಹದ್ದೆಲ್ಲ ನಡೆಯುತ್ತೆ ಅಂತಾ ನಾವು ಮಾನಸಿಕವಾಗಿ ತಯಾರಿದ್ದು ಕೆಲಸ ಮಾಡ್ತೀವಿ, ಮುಂದೆಯೂ ಮಾಡ್ತೀವಿ.
ಯಾವುದೇ ಕಾನೂನು ಉಲ್ಲಂಘನೆ ಮಾಡಿ ಕೆಲಸ ಮಾಡಿಲ್ಲ. ಛತ್ರಪತಿ ಶಿವಾಜಿ ಮಹಾರಾಜರ ಭಾಷೆ ಸಂರಕ್ಷಣೆಗೆ ಎಲ್ಲರೂ ಒಗ್ಗೂಡಿ, ಜೈ ಮಹಾರಾಷ್ಟ್ರ ಎಂದ ಶುಭಂ ಶೆಳ್ಕೆ.
ಜೈಲಿಗೆ ಹೋಗಿ ಬಂದರೂ ಬುದ್ದಿ ಕಲಿಯದ ಎಂಇಎಸ್ ಪುಂಡ