ಉ.ಕ ಸುದ್ದಿಜಾಲ ಅಥಣಿ :
ಸ್ವಾಮಿಗಳು ಒಬ್ಬ ವ್ಯಕ್ತಿಗತವಾಗಿ ಹೋರಾಟ ಮಾಡುವುದು ತಪ್ಪು. ಜಯಮೃತ್ಯುಂಜಯ ಸ್ವಾಮೀಜಿ ನಡೆಗೆ ಶಾಸಕ ರಾಜು ಕಾಗೆ ಅಸಮಾಧಾನ, ಸ್ವಾಮೀಜಿಗಳು ಸಮಾಜದ ಪರವಾದ ನಿಲುವಿರಬೇಕು ಎಂದ ಕಾಗವಾಡ ಶಸಕ ರಾಜು ಕಾಗೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಖಿಳೆಗಾಂವ ಗ್ರಾಮದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು ಯತ್ನಾಳ್ ಅವರನ್ನು ಪಕ್ಷ ಉಚ್ಚಾಟನೆ ಮಾಡಿದ್ದೂ ಅವರ ಆಂತರಿಕ ವಿಷಯ. ಸ್ವಾಮಿಗಳು ಪಂಚಮಸಾಲಿ 2 ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುದು ಸ್ವಾಗತಾರ್ಹ.. ಆದ್ರೆ ರಾಜಕೀಯವಾಗಿ, ಒಬ್ಬ ವ್ಯಕ್ತಿಯ ಪರವಾಗಿ ಹೋರಾಟ ಮಾಡುವುದು ತಪ್ಪು ಎಂದರು.
2ಎ ಮೀಸಲಾತಿ ವಿಚಾರಕ್ಕೆ ಕಾಂಗ್ರೆಸ್ ಸರ್ಕಾರ ಹಿಂದೇಟು ವಿಚಾರ* ನನಗೆ ಅಷ್ಟೊಂದು ವಿಷಯ ಗೊತ್ತಿಲ್ಲ. ಅದರಲ್ಲಿ ಕಾನೂನು ಅಡೆ ತಡೆಗಳಿವೆ. ಅದರ ಬಗ್ಗೆ ನಾನು ವಯಕ್ತಿಕವಾಗಿ ಏನು ಹೇಳಲು ಸಾಧ್ಯವಿಲ್ಲ ನಮ್ಮ ಸರ್ಕಾರವು 2ಎ ಮೀಸಲಾತಿ ವಿಚಾರಕ್ಕೆ ಚಿಂತನೆ ನಡೆಸಿದೆ ನಾನು ಸಿಎಂ ಜೊತೆ ಈ ವಿಚಾರವಾಗಿ ಮಾತನಾಡುತ್ತೇನೆ. ಶೀಘ್ರವೇ ತೊಡಕು ನಿವಾರಣೆಯಗುತ್ತದೆ ಎಂದರು.
ಯತ್ನಾಳ್ ಕಾಂಗ್ರೆಸ್ ಗೆ ಬರಲ್ಲ ಅವರು ಬಂದ್ರೆ ಸ್ವಾಗತ. ಯತ್ನಾಳ್ ವಿಚಾರಕ್ಕೆ ಕೈ ಶಾಸಕ ರಾಜು ಕಾಗೆ ಹೇಳಿಕೆ. ನಾನು ವಯಕ್ತಿಕವಾಗಿ ಯತ್ನಾಳ್ ಕಾಂಗ್ರೆಸ್ ಸೇರ್ಪಡೆ ಆದ್ರೆ ಸ್ವಾಗತ ಕೋರುತ್ತೇನೆ. ಹೈ ಕಮಾಂಡ ವಿಚಾರ ಅವರಿಗೆ ಬಿಟ್ಟಿದ್ದು..
ಯತ್ನಾಳ ನಾನು ಸತ್ರು ಕಾಂಗ್ರೆಸ್ ಗೆ ಬರಲ್ಲ ಅಂತಾರೆ ಶಿಸ್ತಿನ ಪಕ್ಷ ಇವತ್ತು ನಾಶ ಬಿಜೆಪಿ ಯಲ್ಲಿ ಒಡಕು. ಬಿಜೆಪಿ ವಿರುದ್ಧ ಕೈ ಶಾಸಕ ಗರಂ ಹಳೆ ಬಿಜೆಪಿ ಪಕ್ಷ ಇವತ್ತು ಉಳಿದಿಲ್ಲ. ಪಕ್ಷದ ನಿಲುವ ಸಿದ್ದಾಂತ ಬದಲಾವಣೆ ಆಗಿದೆ. ಬಿಜೆಪಿ ಪಕ್ಷದಲ್ಲಿರುವ ಶಿಸ್ತು ಇವತ್ತು ಸ್ವಲ್ಪವು ಉಳಿದಿಲ್ಲ..
ಬಸವೇಶ್ವರ ಏತ ನೀರಾವರಿ ಎರಡನೇ ಹಂತದ ಕಾಮಗಾರಿ ವಿಳಂಬ ವಿಚಾರ ಈಗಾಗಲೆ ಬಸವೇಶ್ವರ ಏತ ನೀರಾವರಿ ಕಾಮಗಾರಿಗೆ 10 ಕೋಟಿ ಬಿಡುಗಡೆ ಯಾಗಿದೆ.. ಈಗಾಗಲೆ 3 ಪಂಪ್ ಸೆಟ್ ಪ್ರಾರಂಭವಾಗಿದೆ ಬರುವ ಜೂನ್ ಒಳಗಾಗಿ ಕಾಮಗಾರಿ ಪೂರ್ಣ ಗೊಳ್ಳುತ್ತದೆ. ಶೀಘ್ರವೇ ಎಲ್ಲ ಗ್ರಾಮಗಳಿಗೂ ನೀರು ಪೂರೈಕೆ ಮಾಡಲಾಗುವುದು ಎಂದರು.
ಪಂಚಮಸಾಲಿ ಸ್ವಾಮೀಜಿಗೆ ಸಶಾಸಕ ರಾಜು ಕಾಗೆ ಏನ ಅಂದರು ಒಮ್ಮೆ ಕೇಳಿ