ಉ.ಕ ಸುದ್ದಿಜಾಲ ರಾಮನಗರ :
ಹಾಡುಹಗಲೇ ಬಾರ್ ಮುಂದೆ ಅಟ್ಟಾಡಿಸಿ ಕೊಲೆಗೈದಿದ್ದ ಹಂತಕರಿಗೆ ಜೀವಾವಧಿ ಶಿಕ್ಷೆ.! 2021ರ ಕೊಲೆ ಪ್ರಕರಣದ 12 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ. ರಾಮನಗರ 2ನೇ ಅಪರ ಜಿಲ್ಲಾ& ಸತ್ರ ನ್ಯಾಯಾಲಯದಿಂದ ಆದೇಶ.
ಮಾದೇಶ್, ಶಿವಕುಮಾರ್, ಲೋಕೇಶ್, ಕಾರ್ತಿಕ್, ವೇಣುಗೋಪಾಲ್, ದಿಲೀಪ್ ರಾಜ್, ರಾಮಚಂದ್ರ, ಗುರಪ್ಪ, ರಘು, ದಶರಥ, ಹರೀಶ್, ಸುರೇಶ್ ಜೀವಾವಧಿಗೆ ಶಿಕ್ಷೆಗೆ ಗುರಿಯಾದವರು. 2021ರಲ್ಲಿ ಕನಕಪುರ ತಾಲೂಕಿನ ಹುಣಸನಹಳ್ಳಿ ಬಾರ್ ಬಳಿ ನಡೆದಿದ್ದ ಕೊಲೆ.
ತಮಿಳುನಾಡು ಮೂಲದ ಶಂಕರ ಎಂಬಾತನನ್ನ ಬಾರ್ ಮುಂದೆ ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಜಮೀನಿನ ವಿಚಾರಕ್ಕೆ ದಾಯಾದಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಪ್ರಕರಣ ಸಂಬಂಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ 17ಮಂದಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
5 ಮಂದಿ ಆರೋಪಿಗಳು ಪರಾರಿಯಾಗಿದ್ದು, ಉಳಿದ 12 ಮಂದಿಯನ್ನ ಬಂಧನ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ರಾಮನಗರ 2ನೇ ಅಪರ ಜಿಲ್ಲಾ &ಸತ್ರ ನ್ಯಾಯಾಲಯ,
ಕೊಲೆ ಆರೋಪ ಸಾಬೀತಾದ ಹಿನ್ನಲೆ 12 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1 ಲಕ್ಷ ದಂಡ ವಿಧಿಸಿ ಆದೇಶ. ನ್ಯಾಯಾಧೀಶರಾದ ಕುಮಾರ್ ಎಚ್.ಎನ್ ರಿಂದ ಆದೇಶ.
ಹಾಡುಹಗಲೇ ಬಾರ್ ಮುಂದೆ ಅಟ್ಟಾಡಿಸಿ ಕೊಲೆಗೈದಿದ್ದ ಹಂತಕರಿಗೆ ಜೀವಾವಧಿ ಶಿಕ್ಷೆ.!
