ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರದಿಂದ ನಿರಂತರ ಕಿರಿಕ್. ಗಡಿ ಭಾಗದ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗೆ ಶಿವಾಜಿ ವಿಶ್ವವಿದ್ಯಾಲಯ ಆಫರ್. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇರುವ ಶಿವಾಜಿ ವಿಶ್ವವಿದ್ಯಾಲಯ.
ಗಡಿ ಸಮಸ್ಯೆ ಇರೋ ಬೆಳಗಾವಿ ಸೇರಿ 165 ಗ್ರಾಮಗಳ ವಿದ್ಯಾರ್ಥಿಗಳಿಗೆ ಆಫರ್. ವಿದ್ಯಾರ್ಥಿಗಳಿಗೆ ಶೇ 75ರಷ್ಟು ಶುಲ್ಕು ವಿನಾಯಿತಿ, ಉಚಿತ ಹಾಸ್ಟೆಲ್ ಸೌಲಭ್ಯ. ಮರಾಠಿ ಭಾಷಿಕ ವಿದ್ಯಾರ್ಥಿಗಳಿಗಾಗಿ ಬೆಳಗಾವಿಯ ಮೂರು ಕಡೆಗಳಲ್ಲಿ ಕಾರ್ಯಾಗಾರ.
ಏಪ್ರಿಲ್ 22ರಂದು ನಡೆಯಲಿರೋ ಏಕಕಾಲದಲ್ಲಿ ಕಾರ್ಯಾಗಾರ. ನಿಪ್ಪಾಣಿ, ಬೆಳಗಾವಿ ಹಾಗೂ ಖಾನಾಪುರದಲ್ಲಿ ಕಾರ್ಯಾಗಾರ ಮಾಡಿ ಕೋರ್ಸ್, ಸೌಲಭ್ಯ ಬಗ್ಗೆ ಮಾಹಿತಿ. ಶಿವಾಜಿ ವಿವಿಯಲ್ಲಿ ಮುಂದಿನ ತಿಂಗಳು ವಿವಿಧ ಕೋರ್ಸ್ ಗಳ ಪ್ರವೇಶಾತಿ ಆರಂಭ. ಗಡಿ ಭಾಗದ ವಿದ್ಯಾರ್ಥಿಗಳನ್ನು ಸೆಳೆಯಲು ಮುಂದಾದ ಶಿವಾಜಿ ವಿಶ್ವ ವಿದ್ಯಾಲಯ.
ನಾನು ಮರಾಠಿ ಭಾಷಿಕ ಎಂದು ಪ್ರಮಾಣ ಕೊಡುವ ಅಭ್ಯರ್ಥಿಗಳಿಗೆ ರಿಯಾಯಿತಿ. ಮಹಿಳಾ ವಿವಿ ಸೇರಿ ಉತ್ತರ ಕರ್ನಾಟಕದಲ್ಲಿವೆ ಐದಕ್ಕೂ ಅಧಿಕ ವಿಶ್ವವಿದ್ಯಾಲಯಗಳು. ಹೀಗಿದ್ದರೂ ಬೆಳಗಾವಿ ಗಡಿ ಭಾಗದ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗೆ ಆಫರ್ ನೀಡ್ತಿರುವ ವಿವಿ.
ಒಕ್ಕೂಟ ವ್ಯವಸ್ಥೆಗೆ ಮಹಾ ಸರ್ಕಾರ ಧಕ್ಕೆ ತರುತ್ತಿದ್ದರೂ ರಾಜ್ಯ ಸರ್ಕಾರ ಮೌನ. ಗಡಿ ಕನ್ನಡಿಗರನ್ನು ಕೆರಳಿಸಿದ ಮಹಾರಾಷ್ಟ್ರ ಸರ್ಕಾರದ ಶಿಕ್ಷಣ ಮೀಸಲಾತಿ ನಿರ್ಧಾರ..
ಗಡಿ ಭಾಗದ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗೆ ಶಿವಾಜಿ ವಿಶ್ವವಿದ್ಯಾಲಯ ಆಫರ್
