ಉ.ಕ ಸುದ್ದಿಜಾಲ ಚಿಕ್ಕೋಡಿ :
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮಿರಜ್ ತಾಲೂಕಿನ ಮೈಶಾಳ ಗ್ರಾಮದಲ್ಲಿ ವಿದ್ಯುತ್ ತಗುಲಿ ಮಗು ತಂದೆ ಸೇರಿ ಮೂವರು ಸಾವನಪ್ಪಿದ್ದು ಓರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಪ್ರದೀಪ ಶ್ರೀಕೃಷ ವನಮೋರೆ (34) ಶಾಹೀರಾಜ ವನಮೋರೆ (12) ಪಾರಸನಾಥ ವನಮೋರೆ (40) ಮೃತ ದುರ್ದೈವಿಗಳಾಗಿದ್ದು, ಹೆಮಂತ ವನಮೋರೆ ಗಂಭೀರ ಗಾಯಗೊಂಡಿದ್ದಾನೆ, ಆತನನ್ನ ಮಿರಜ್ ಆಸ್ಪತ್ರೆಗೆ ರವಾನಿಸಲಾಗಿದೆ.
ಗದ್ದೆಯಲ್ಲಿ ನೀರು ಹಾಯಿಸಲು ಹೋದಾಗ ವಿದ್ಯುತ್ ತಂತಿ ಕಟ್ ಆಗಿ ಬಿದ್ದ ಪರಿಣಾಮ ಮೂವರಿಗೆ ವಿದ್ಯುತ್ ತಗಿಲಿ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮಿರಜ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.