ಉ.ಕ ಸುದ್ದಿಜಾಲ ರಾಯಬಾಗ :

ಬೆಳಗಾವಿ ಜಿಲ್ಲೆಯ ರಾಯಬಾಗತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದುಹೋಗಿದೆ. ಮೂರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ತಾಯಿ ಆತ್ಮಹತ್ಯೆ. ಮೂರು ಮಕ್ಕಳು ಮತ್ತು ತಾಯಿ ಸಾವು .

ತಾಯಿ ಶಾರದಾ ಡಾಲೆ (32) ಮಕ್ಕಳಾದ ಅಮೃತಾ(14), ಆದರ್ಶ(8) ಹಾಗೂ ಅನುಕ್ಷಾ ಮೃತರು. ಗಂಡ ಅಶೋಕ ಡಾಲೆ(45) ಕಿರುಕುಳ ತಾಳಲಾರದೇ ಆತ್ಮಹತ್ಯೆ. ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಗಂಡ ಅಶೋಕ.

ಇದರಿಂದ ಮನನೊಂದು ಮೂರು ಮಕ್ಕಳ ಜೊತೆಗೆ ಇಂದು ನದಿಗೆ ಹಾರಿದ್ದ ಶಾರದಾ ಅನುಕ್ಷಾನನ್ನ ಕೂಡಲೇ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಅನುಕ್ಷಾ.

ಗಂಡ ಅಶೋಕ ಡಾಲೆ ಕುಡಚಿ ಪೊಲೀಸರ ವಶಕ್ಕೆ. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ. ತಾಯಿ ಸೇರಿದಂತೆ ನಾಲ್ವರು ಸಾವು. ಗಂಡ ಅಶೋಕ ಡಾಲೆ ಪೊಲೀಸರ ವಶಕ್ಕೆ.