ಉ.ಕ ಸುದ್ದಿಜಾಲ ಬೆಳಗಾವಿ :

ಅವರಿಬ್ಬರು ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿ ಮಾಡಿದ್ದರು. ಆದ್ರೆ, ಮದುವೆಗೆ ಕುಟುಂಬಸ್ಥರು ಒಪ್ಪಿಗೆ ಕೊಟ್ಟಿರಲಿಲ್ಲ. ಯುವಕನಿಗೆ ಒಳ್ಳೆಯ ಉದ್ಯೋಗ ಇಲ್ಲ ಎನ್ನುವ ಸಬೂಬನ್ನು ಯುವತಿ ಮನೆಯವರು ನೀಡಿದ್ದರು. ಇದನ್ನೇ ಗಂಭೀರವಾಗಿ ತೆಗೆದುಕೊಂಡ ಪ್ರೇಮಿಗಳು ತಮ್ಮ ಬದುಕನ್ನೇ ಅಂತ್ಯಗೊಳಿಸಿದ್ದಾರೆ.

ಪ್ರೀತಿಗೆ ನಿರಾಕರಣೆ.. ಬೆಳಗಾವಿಯಲ್ಲಿ ಪ್ರೇಮಿಗಳ ದುರಂತ ಅಂತ್ಯ, ಯುವಕನ ಹೆಸರು ಪ್ರಶಾಂತ್ ಕುಂಡೇಕರ್. ಯುವತಿಯ ಹೆಸರು ಐಶ್ವರ್ಯ ಲೋಹಾರ್. ಈಕೆಗೆ ಜಸ್ಟ್ 18 ವರ್ಷ ದಾಟಿದೆ. ಮೇಜರ್ ಆಗಿದ್ದಾರೆ. ಆದರೆ ಈ ಇಬ್ಬರು ಪ್ರೇಮಿಗಳ ದುರಂತ ಅಂತ್ಯ ಕಂಡು ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ.

ಯಳ್ಳೂರು ಗ್ರಾಮದ ನಿವಾಸಿಯಾಗಿದ್ದ ಪ್ರಶಾಂತ್, ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಒಂದೂವರೆ ವರ್ಷದಿಂದ ಐಶ್ವರ್ಯ ಮತ್ತು ಪ್ರಶಾಂತ್ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಕೊನೆಗೆ ಇಬ್ಬರು ಮದುವೆ ಆಗುವ ನಿರ್ಧಾರವನ್ನೂ ಮಾಡಿದ್ದರು.

ಆದರೆ, ಇವರಿಬ್ಬರ ಈ ನಿರ್ಧಾರಕ್ಕೆ ಯುವತಿಯ ತಾಯಿ ವಿರೋಧ ಮಾಡಿದ್ದರು. ಮೊದಲು ಒಳ್ಳೆಯ ಕೆಲಸ ಹುಡುಕಿಕೋ ಆಮೇಲೆ ನೋಡೊಣ. ಅಲ್ಲಿಯವರೆಗೆ ಮದುವೆ ಬಗ್ಗೆ ಮಾತಾಡೋದು ಬೇಡ ಎಂದು ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ಆದ್ರೆ ಮುಂದೆ ಆಗಿದ್ದೇ ಘನಘೋರ ದುರಂತ.

ಪ್ರೇಮಿಗಳ ದುರಂತ ಅಂತ್ಯದ ಸುದ್ದಿ ಹೇಳಿ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು ನೂರಾರು ಜನ ಮನೆಯ ಬಳಿ ಜಮಾಯಿಸಿ ಏನಾಗಿದೆ ಎಂದು ಆತಂಕದಿಂದ ನೊಡುತ್ತಿದ್ದರು. ಇನ್ನು ಯುವತಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಇನ್ನು ಪ್ರೇಮಿಗಳು ಮೃತಪಟ್ಟ ಸ್ಥಳದಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ವಿಷಯ ತಿಳಿದ ಕೂಡಲೇ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅದೇನೆ ಇರಲಿ, ಮದುವೆಗೆ ಕುಟುಂಬಸ್ಥರು ಒಪ್ಪಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಇಬ್ಬರು ಪ್ರೇಮಿಗಳು ತಮ್ಮ ಬದುಕಿಗೆ ಫುಲ್ ಸ್ಟಾಪ್ ಇಟ್ಟಿದ್ದು ದುರಂತವೇ ಸರಿ.