ಉ.ಕ ಸುದ್ದಿಜಾಲ ಬೆಳಗಾವಿ :

75 ವರ್ಷಗಳಿಂದ ರಾಜ್ಯದಲ್ಲಿ ಎಲ್ಲ ಪಕ್ಷದ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಮಾಜಿ ಸೈನಿಕರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ದೇಶ ಕಾಯುವ ಕಾಯಕವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಿ ನಿವೃತ್ತಿ ಜೀವನ ನಡೆಸುತ್ತಿರುವ ಮಾಜಿ ಸೈನಿಕರಿಗೆ ಸರ್ಕಾರದಿಂದ ಸೂಕ್ತ ಸ್ಥಾನ ಮಾನ ಸಿಗುವಂತಾಗಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಬೆಗಾವಿ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಉದ್ಘಾಟಿಸಿ ಅವರು ಮಾತನಾಡಿ, ಸೈನಿಕರು ಯಾವಗಲೂ ಸಮಯಕ್ಕೆ ಬದ್ದರಾಗಿರುತ್ತಾರೆ. ನಮ್ಮದು ಸಹ ದೇಶ ಕಾಯುವ ಸೈನಿಕರ ಜತೆ ಸಾಕಷ್ಟು ಒಡನಾಟವಿದ್ದು, ಅವರ ಅನುಭವ ನಮಗೆ ಗೊತ್ತಿದೆ.

ಅವರು ನಮಗೆ ಭೇಟಿಯಾದಾಗ ಅವರಲ್ಲಿರುವ ಸಮಸ್ಯೆಯನ್ನು ಹೇಳುತ್ತಿರುತ್ತಾರೆ.  ಇಂದು ಹೊಸ ಯೋಧರಿಗೆ ಟ್ರೇನಿಂಗ್‌ ನೀಡಲು ಸಾಕಷ್ಟು ಖರ್ಚಾಗಲಿದ್ದು, ನೂರಿತ ಯೋಧರ ಸೇವೆಯನ್ನು ಇಂದು ಸರ್ಕಾರ ಬಳಿಸಿಕೊಳ್ಳಬೇಕಿದೆ ಎಂದು ತಿಳಿ ಹೇಳಿದರು.

ಈ ಸಂಘಟನೆಯ ಮುಖಾಂತರ ನಿವೃತ್ತ ಸೈನಿಕರ ಹಿತಕಾಯುವಲ್ಲಿ ಮುಂದಾಬೇಕು, ದೇಶದಲ್ಲಿ ಮಾಜಿ ಸೈನಿಕರು ಕೇವಲ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಮಾಜದಲ್ಲಿ ಗೌರಯುತ ಸ್ಥಾನ ಪಡೆಯುವಂತಾಗಬೇಕು ಎಂದು ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಸಂಘದ ರಾಜ್ಯಾಧ್ಯಕ್ಷ ಡಾ. ಶಿವಣ್ಣ ಎನ್‌.ಕೆ, ಗೌರವ ಅಧ್ಯಕ್ಷ ನಾಗಪ್ಪ ಕಳಸನ್ನವರ, ಉಪಾಧ್ಯಕ್ಷ ವಿರೂಪಾಕ್ಷ ತಿಳಗಂಜಿ, ದಯಾನಂದ ಢಾಳಿ, ರಮೇಶ ಚೌಗುಲಾ, ಪ್ರಧಾನ ಕಾರ್ಯದರ್ಶಿ ಜಗದೀಶ ಪೂಜೇರಿ, ಕಾರ್ಯದರ್ಶಿ ಶಿವಬಸಪ್ಪ ಕಾಡನ್ನವರ ಸೇರಿದಂತೆ ಮಾಜಿ ಸೈನಿಕರು ಇದ್ದರು.