ಉ.ಕ ಸುದ್ದಿಜಾಲ ಗದಗ :
ಅನುಮತಿ ಇಲ್ಲದೇ ಕಿರಿಯ ಶ್ರೀಗಳ ಕೋಣೆ ಬೀಗ ಒಡೆದು ಪ್ರವೇಶಿಸಿದ್ದಕ್ಕೆ ಆಕ್ರೋಶ. ಶಿವಾನಂದ ಮಠದ ಆಂತರಿಕ ಬಿಕ್ಕಟ್ಟು ಸ್ಫೋಟ, ಮಠದ ಅಂಗಳದಲ್ಲಿ ಹೈಡ್ರಾಮಾ. ಗದಗ ಶಿವಾನಂದ ಮಠದ ಅಂಗಳದಲ್ಲಿ ಕಿರಿ-ಹಿರಿ ಶ್ರೀಗಳ ಮುನಿಸು ಸ್ಫೋಟ.
ಮಠದ ಅಂಗಳದಲ್ಲಿ ಕಾರ್ ನಲ್ಲೇ ಕೂತ ಕಿರಿಯ ಶ್ರೀ ಸದಾಶಿವಾನಂದ ಭಾರತಿ ಸ್ವಾಮೀಜಿ. ಮಠದ ಶ್ರೀ ಅಭಿನವ ಶಿವಾನಂದ ಸ್ವಾಮಿಜಿ ಹಾಗೂ ಕಿರಿಯ ಶ್ರೀ ಮಧ್ಯದ ಮುನಿಸು. ಕಿರಿಯ ಶ್ರೀಗಳ ಅನುಪಸ್ಥಿತಿಯಲ್ಲಿ ಕೋಣೆ ಓಪನ್ ಮಾಡಿದ್ದ ಬಗ್ಗೆ ಆರೋಪ..
ಆರೋಪ ತಳ್ಳಿ ಹಾಕುತ್ತಿರುವ ಹಿರಿಯ ಶ್ರೀ ಅಭಿನವಶಿವಾನಂದ ಸ್ವಾಮಿಗಳು. 28/11/22 ರಂದು ಉತ್ತರಾಧಿಕಾರಿ ಪದಚ್ಯುತ ಗೊಳಿಸಲಾಗಿದೆ. ಕಿರಿಯ ಶ್ರೀಗಳು ಮಠದ ಪರಂಪರೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಸನಾತನ ಸಂಸ್ಕೃತಿ, ಸಂಪ್ರದಾಯ, ಪೂಜೆ, ಪುನಸ್ಕಾರದ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ.
ಮನಸ್ಸಿಗೆ ನೋವಾಗಿ ಹೀಗಾಗಿ ಉತ್ತಾರಿಧಿಕಾರಿಯಿಂದ ತೆಗೆದಿದ್ದೇವೆ. ಕಳೆದ ಎಂಟು ತಿಂಗಳಿಂದ ಮಾನ ಮಾರ್ಯಾದೆ ಕೊಡುತ್ತಿಲ್ಲ. ಮಾಧ್ಯಮದ ಎದುರು ಅಸಮಾಧಾನ ತೋಡಿಕೊಂಡ ಹಿರಿಯ ಶ್ರೀಗಳು. ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಕಿರಿಯ ಶ್ರೀಗಳ ನಿರಾಕರಣೆ..
ಮಠದ ಅಂಗಳದಲ್ಲಿ ಬೀಡು ಬಿಟ್ಟ ಉಭಯ ಶ್ರೀಗಳ ಭಕ್ತರು. ಪೊಲೀಸರ ಮಧ್ಯ ಪ್ರವೇಶ, ಕಿರಿಯ, ಹಿರಿಯ ಶ್ರೀಗಳ ಜೊತೆ ಚರ್ಚೆ.