ಉ.ಕ ಸುದ್ದಿಜಾಲ ಬೆಳಗಾವಿ :
ಡಿ.6 ರಂದು ಮಹಾರಾಷ್ಟ್ರ ಸಚಿವವರು ಬೆಳಗಾವಿಗೆ ಭೇಟಿ ವಿಚಾರವಾಗಿ ಮಹಾ ಸಚಿವರು ಗಡಿ ಕ್ಯಾತೆ ತೆಗೆದ್ರೆ ಅವರ ಮುಖಕ್ಕೆ ಮಸಿ ಬಳಿಯುತ್ತೇವೆ ಕರವೇ ಜಿಲ್ಲಾಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ.
ಮಹಾ ಸಚಿವರು ಬೆಳಗಾವಿಗೆ ಬಂದು ಗಡಿ ವಿವಾದ ಎತ್ತುವ ಸೂಚನೆ ಕೊಟ್ಟಿದ್ದಾರೆ. ಅದನ್ನು ಖಂಡಿಸಿ ಕರವೇ (ಪ್ರವೀಣ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಆರ್ ಅಭಿಲಾಷ ಸುದ್ದಿಗೋಷ್ಠಿ ನಡೆಸಿದ್ದಾರೆ. ಮಹಾ ಸಚಿವರು ರಾಜ್ಯಕ್ಕೆ ಬರುವುದು ಯಾವುದೇ ರೀತಿಯ ಅಭ್ಯಂತರ ಇಲ್ಲ. ಅಭಿವೃದ್ಧಿಗಾಗಿ ಮಾತನಾಡಲು ಬರುವುದಾದರೆ ಸ್ವಾಗತ.
ದೇಶ, ರಾಜ್ಯ, ರೈತರ ಅಭಿವೃದ್ಧಿ ಬಗ್ಗೆ ಮಾತನಾಡಿದರೆ ಬೆಳಗಾವಿಯ ಕುಂದಾ ಕೊಡುತ್ತೇವೆ. ಅದನ್ನು ಬಿಟ್ಟು ಗಡಿ ವಿಚಾರ ಮಾತನಾಡಿ ಗಡಿ ಕ್ಯಾತೆ ತಗದ್ರೆ ಅವರ ಮುಖಕ್ಕೆ ಮಸಿ ಬಳಿಯುತ್ತೇವೆ. ಈಗಾಗಲೇ ನಮ್ಮ ಸಿಎಂ ಅವರಿಗೆ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ.
ಸಿಎಂ ಮಾತಿಗೆ ಬೆಲೆ ಕೊಡದೆ ಹೋದ್ರೆ ಅವರಿಗೆ ನಾವೇ ತಕ್ಕ ಶಾಸ್ತಿ ಮಾಡುತ್ತೇವೆ. ಡಿ.6ರಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ ಬೆಳಗಾವಿಗೆ ಬರುತ್ತಾರೆ. ಪ್ರತಿ ಬಾರಿ ಇವರ ಪುಂಡಾಟ ಸಹಿಸಿದ್ದೇವೆ ಈ ಬಾರಿ ಹೋರಾಟ ಆಗಲ್ಲ ಕ್ರಾಂತಿ ಆಗುತ್ತೆ ಎಂದು ಎಚ್ಚರಿಕೆ.