ಉ.ಕ ಸುದ್ದಿಜಾಲ ಚಿಕ್ಕೋಡಿ :

ಕೊಟ್ಟ ಮಾತಿನಂತೆ ನಡೆದುಕೊಂಡ ಲಕ್ಷ್ಮಣ ಸವದಿ, ಜಿಲ್ಲೆಯಲ್ಲಿ ತನ್ನದೆಯಾದ ಸ್ಥಾನಮಾನ ಹೊಂದಿದ ಸತೀಶ ಜಾರಕಿಹೋಳಿ ಈ ಇಬ್ಬರಲ್ಲಿ ಯಾರಿಗೆ ಉನ್ನತ ಸಚಿವ ಸ್ಥಾನಮಾನ ನೀಡುತ್ತಾರೆ ಎಂಬುದು ಸದ್ಯ ಜಿಲ್ಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಸಿದ್ದರಾಮಯ್ಯ ಅವರ ಆಪ್ತರಲ್ಲಿ ಗುರತಿಸಿಕೊಂಡಿರುವ ಸತೀಶ ಜಾರಕಿಹೋಳಿ ಜಿಲ್ಲೆಯಲ್ಲಿ ತಮ್ಮದೆಯಾದ ವರ್ಚಸ್ಸನ್ನ ಉಳಸಿಕೊಂಡಿದ್ದರೆ.

ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ‌ಗೆ ಬಂದ ಲಕ್ಷ್ಮಣ ‌ಸವದಿ ಕೂಡಾ ತಮ್ಮ ಸುತ್ತಮುತ್ತಲಿನ ಎರಡು ಕ್ಷೇತ್ರಗಳನ್ನ ಗೆಲ್ಲಿಸಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಕೊಟ್ಟ ಮಾತಿನಂತೆ ಕುಡಚಿ ಹಾಗೂ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬರುವಲ್ಲಿ ಲಕ್ಷ್ಮಣ ಸವದಿ ಯಶಶ್ವಿಯಾಗಿದ್ದಾರೆ.

ಲಕ್ಷ್ಮಣ ಸವದಿ ಕೊಟ್ಟ ಮಾತಿನಂತೆ ಕಾಗವಾಡ, ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸುತ್ತೇನೆ ಅವರನ್ನ ಹೆಗಲ ಮೇಲೆ ಹೋತ್ತಿಕೊಂಡು ವಿಧಾನಸಭೆಗೆ ಬರತ್ತಿನಿ‌ ಅಂತಾ ಕುಡಚಿ‌ ಮತಕ್ಷೇತ್ರದ ಹಾರುಗೇರಿಯ ಪ್ರಜಾಧ್ವನಿಯಾತ್ರೆಯಲ್ಲಿ ಸಿದ್ದರಾಮಯ್ಯ ಮುಂದೆ ಪ್ರತಿಜ್ಞೆ ಮಾಡಿದ್ದ ಲಕ್ಷ್ಮಣ ಸವದಿ ಮಾತಿನಂತೆ ಕಾಗವಾಡದಿಂದ ರಾಜು ಕಾಗೆ ಹಾಗೂ ಕುಡಚಿಯಿಂದ ಮಹೇಶ ತಮ್ಮನ್ನವರ ಗೆಲ್ಲಿಸಲು ಲಕ್ಷ್ಮಣ ಸವದಿ ಯಶಶ್ವಿಯಾಗಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಸಂಚಲ ಮೂಡಿಸಿದ್ದು ಎಂದರೆ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು. ಕಳೆದ ಬಾರಿ ಪಕ್ಷದ ಹಿತದೃಷ್ಟಿಯಿಂದ ಕ್ಷೇತ್ರ ಬಿಟ್ಟು ಕೊಟ್ಟಿದ್ದ ಲಕ್ಷ್ಮಣ ಸವದಿಯವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಕೊಡುವುದಾಗಿ ಮಾತು ಕೊಟ್ಟಿತ್ತು. ಆದರೆ, ಇಂತಹ ಸಾರ್ವತ್ರಿಕ ಚುನಾವಣೆ ಹೊತ್ತಿನಲ್ಲಿ ಅವರಿಗೆ ಟಿಕೆಟ್ ನಿರಾಕರಿಸಿ ಬಿಜೆಪಿ ಎಡವಟ್ಟು ಮಾಡಿಕೊಂಡಿತ್ತು.

ಇದರಿಂದ ಕೆರಳಿ ಕೆಂಡವಾಗಿದ್ದ ಲಕ್ಷ್ಮಣ ಸವದಿ ನೇರವಾಗಿ ಕಾಂಗ್ರೆಸ್ ಸೇರ್ಪಡೆಗೊಂಡು ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಅಷ್ಟೇ ಅಲ್ಲ, ತಾವೇ ಕಟ್ಟಿ ಬೆಳಿಸಿದ ಬಿಜೆಪಿಗೆ ಅಷ್ಟೇ ಅಲ್ಲ, ರಮೇಶ ಜಾರಕಿಹೊಳಿ ಅವರಿಗೂ ಸೆಡ್ಡು ಹೊಡೆದಿದ್ದರು. ಬಿಜೆಪಿ ಘಟಾನುಘಟಿ ನಾಯಕರೇ ಬಂದು ಪ್ರಚಾರ ನಡೆಸಿ ಹೋಗಿದ್ದರೂ ಕೊನೆಗೆ ಜಯದ ಮಾಲೆಯನ್ನು ತಮ್ಮ ಕೊರಳಿಗೆ ಹಾಕಿಕೊಂಡಿದ್ದರು.

ಬಿಜೆಪಿ ಹೈಕಮಾಂಡ್ ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಇದ್ದಾಗ ಲಕ್ಷ್ಮಣ ಸವದಿ ಅವರು ಅನಿವಾರ್ಯವಾಗಿ ಬಿಜೆಪಿ ತೊರೆಯಬೇಕಾಯಿತು. ಈ ಬಾರಿ ಟಿಕೆಟ್ ಕೊಡುತ್ತೇವೆ ಎಂದು ಹೇಳಿದವರೇ ಟಿಕೆಟ್ ನಿರಾಕರಿಸಿದಾಗ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದ್ದರು. ಇದು ಎಷ್ಟರ ಮಟ್ಟಿಗೆ ಪ್ರಭಾವ ಬೀರಿತೆಂದರೆ, ಬೆಳಗಾವಿ ಜಿಲ್ಲೆಯಷ್ಟೇ ರಾಜ್ಯದಲ್ಲಿಯೂ ಕೂಡ ಪರಿಣಾಮ ಬೀರಿದ್ದನ್ನೂ ಯಾರೂ ಅಲ್ಲಗಳೆಯುತ್ತಿಲ್ಲ.

ಯಾವ ಆಪ್ತನ ವಿರುದ್ಧ ಪ್ರಚಾರ ನಡೆಸಿ ಸೋಲಿಗೆ ಕಾರಣರಾಗಿದ್ದರೋ ಅದೇ ಆಪ್ತ ಸ್ನೇಹಿತ ರಾಜು ಕಾಗೆಯವರನ್ನು ಲಕ್ಷ್ಮಣ ಸವದಿ ಮತ್ತೆ ಗೆಲ್ಲಿಸಿಕೊಂಡು ಬಂದಿದ್ದಾರೆ ತಾವು ಕೊಟ್ಟ ಮಾತಿನಂತೆ ಸವದಿ ಅವರು ನಡೆದುಕೊಂಡಿದ್ದು, ಇನ್ನೂ ಕಾಂಗ್ರೆಸ್ ಪಕ್ಷ ಯಾವ ಸ್ಥಾನ ಮಾನ ನೀಡುತ್ತೆ ಕಾಯ್ದು ನೋಡಬೇಕಿದೆ.

ಇನ್ನೂ ಜಿಲ್ಲೆಯಲ್ಲಿ ತಮ್ಮದೆಯಾದ ವರ್ಸಸ್ ಜೊತೆಗೆ ಜಿಲ್ಲೆಯಲ್ಲಿ ನಾಯಕತ್ವ ಹೊಂದಿರುವ ಸತೀಶ ಜಾರಕಿಹೋಳಿ ಯಮಕನಮರಡಿ‌ಮತಕ್ಷೇತ್ರದಿಂದ ಸ್ಪರ್ಧಿಸಿ 57 ಸಾವಿರ ಅಂತರದಿಂದ ಗೆಲುವನ್ನ ಸಾಧಿಸಿದ್ದಾರೆ.

ಇವರು ತಮ್ಮದೆಯಾದ ಸಂಘಟನೆಗಳನ್ನ ಕಟ್ಟಿಕೊಂಡು ಕಾಂಗ್ರೆಸ್ ಪಕ್ಷ ಒಗ್ಗಟನೆಯಲ್ಲಿ ತಮ್ಮದೆಯಾದ ಪಾತ್ರ ವಹಿಸಿದ್ದು ಮಾನವ ಬಂಧುತ್ವ ವೆಡದಿಕೆಯನ್ನ ಸ್ಥಾಪಿಸುವುದರ ಮೂಲಕ ಹಿಂದೂಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದಲ್ಲೂ ಕೂಡಾ ಸತೀಶ ಜಾರಕಿಹೋಳಿ ಮಾಸ ಲೀಡರ. ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದಲೂ ತಮ್ಮದೆಯಾದ ಛಾಪನ್ನ ಮೂಟಿಸಿರುವ ಸತೀಶ ಜಾರಕಿಹೊಳಿ ಅಪಾರ ಬಳಗವನ್ನ ಹೊಂದಿದ್ದಾರೆ.

ಒಟ್ಟಿನಲ್ಲಿ ಈ ಇಬ್ಬರು ನಾಯಕರು‌ ಸದ್ಯ ಕಾಂಗ್ರೆಸ್ ಹೈಕಮಾಂಡಗೆ ಹತ್ತಿರವಾದವರು ಸತೀಶ ಹಾಗೂ ಲಕ್ಷ್ಮಣ ಈ ಇಬ್ಬರಲ್ಲಿ ಯಾರಿಗೆ ಉನ್ನತ ಮಂತ್ರಿ‌ ಸ್ಥಾನ ಸಿಗುತ್ತೆ ಎಂಬುವುದು ಜಿಲ್ಲೆಯ ಜನರಲ್ಲಿ ಯಕ್ಷ ಪ್ರಶ್ನೆಯಾಗಿ ಉಳದಿದ್ದು ಯಾರಿಗೆ ಯಾವ ಮಂತ್ರಿ ಸ್ಥಾನ ಸಿಗುತ್ತೆ ಕಾಯ್ದು ನೋಡಬೇಕಿದೆ.