ಉ.ಕ ಸುದ್ದಿಜಾಲ ಅಥಣಿ :

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಹಾ ಎಡವಟ್ಟು, ಕಣ್ಣಿಗೆ ಕಾಣದೆ ಹೋಯಿತಾ ಪ್ರಾಣಕ್ಕೆ ಸಂಚಕಾರ ತಂದಿರೋ ಜಲ ಕುಂಭ ಆಗೋ ಇಗೋ ಅನ್ನುತ್ತಿದೆ ಬೃಹತ್ ನೀರಿನ ಟ್ಯಾಂಕ್ ಭಯದ ಆತಂಕದಲ್ಲಿ ಗ್ರಾಮದ ಜನತೆ.

ಹೌದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಪ್ರಾರ್ಥನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಯಣಟ್ಟಿ ಗ್ರಾಮದಲ್ಲಿ ಬೀಳುವ ಹಂತದಲ್ಲಿರುವ ನೀರಿನ ಟ್ಯಾಂಕ ದಿನಂಪ್ರತಿ‌ ಈ ರಸ್ತೆ ಮಾರ್ಗವಾಗಿ‌ ಸಾವಿರಾರು ಜನರು‌.

ಶಾಲಾ ಮಕ್ಕಳು ಭಯದಲ್ಲಿಯೇ ಈ ರಸ್ತೆ ಮಾರ್ಗದ ಮೂಲಕ ತೆರಳಲು ಹೆದರುತ್ತಿದ್ದಾರೆ. ಹಲವಾರು‌ ಬಾರಿ‌ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿದರು ಇತ್ತ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು‌ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಂಬದಲ್ಲಿರುವ ಸ್ಟಿಲ್ ಕೊಳೆತರು ಮೌನಿಯಾಗಿದ್ದಾರೆ ಅಧಿಕಾರಿಗಳು ಪಕ್ಕದಲ್ಲೇ ಶಾಲಾ ವಿದ್ಯಾರ್ಥಿಗಳ ದಿನನಿತ್ಯದ ಆಟವಾಡುತ್ತಾರೆ. ಪ್ರಾಣಕ್ಕೆ ಸಂಚಕಾರ ತಂದಿರೋ ಈ ಜಲ ಕುಂಭ ಅಧಿಕಾರಿಗಳ ನಿರ್ಲಕ್ಷಕ್ಕೆ ರೋಸಿ ಹೋಗಿದ್ದಾರೆ ಜನ. ಅನಾಹುತ ನಡಿಯೋ ಮೊದಲೇ ನಿದ್ರೆಯಿಂದ ಎದ್ದೇಳಿ ಅನ್ನುತ್ತಿದ್ದಾರೆ ಸ್ಥಳೀಯರು.

ಆಗೋ ಇಗೋ ಅನ್ನುತ್ತಿರುವ ಈ ನೀರಿನ ಟ್ಯಾಂಕ್ ಗ್ರಾಮದಲ್ಲಿ ಆತಂಕದ ಭಯ ಸೃಷ್ಟಿಸಿದೆ ಕೂಡಲೇ ಜಿಲ್ಲಾಡಳಿತ ಟ್ಯಾಂಕ್ ತೆರವು ಗೊಳಿಸಿ ಹೊಸ ಜಲ ಕುಂಭದ ವೆವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.