ಉ.ಕ ಸುದ್ದಿಜಾಲ ಕಾಗವಾಡ :

ಎಲ್ಲ ಕಡೆ ಸಕ್ಕರೆ ಕಾರ್ಖಾನೆ ಪ್ರಾರಂಭ ವಾಗಿದ್ದು ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರೇಲರ್, ಟ್ರಕ್ ಹಾಗೂ ಎತ್ತಿನ ಗಾಡಿಗಳು ರಸ್ತೆ ತುಂಬಾ ಓಡಾಡುತ್ತಿವೆ ಹಾಗೂ  ನಿರಂತರ ಮಳೆಯ ಕಾರಣ ರಸ್ತೆಗಳು ಸಹಾ ತುಂಬಾ ಹದಗೆಟ್ಟಿವೆ.

ದ್ವಿಚಕ್ರ ಅಥವಾ ಇನ್ನಾವುದೆ ವಾಹನ ಚಲಿಸುವಾಗ ತುಂಬಾ ಜಾಗರುಕತೆ ಮತ್ತು ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ, ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರೇಲರ್ ಹಾಗೂ ಎತ್ತಿನ ಗಾಡಿಗಳು ರಸ್ತೆ ಬದಿಯಲ್ಲಿ ನಿಂತಾಗ

ಅವುಗಳಿಗೆ, ಯಾವುದೇ ‘ರಿಪ್ಲೇಕ್ಟರ್ ‘ಇಂಡಿಕೆಟರ್’ ಇರುವುದಿಲ್ಲ ನಿಂತ ವಾಹನಗಳು ರಾತ್ರಿ ವೇಳೆ ನಮ್ಮ ಕಣ್ಣಿಗೆ ಕಾಣುವುದಿಲ್ಲ ಇದರಿಂದ ಘೋರ ಹಾಗೂ ಮಾರಣಾಂತಿಕ ಅಪಘಾತಗಳು ನಡೆಯುತ್ತಿವೆ.

ಕಾಗವಾಡ ಪೋಲಿಸ್ ಠಾಣೆಯಿಂದ ಟ್ರ್ಯಾಕ್ಟರ್ ಮಾಲೀಕರು ಮತ್ತು ಚಾಲಕರಲ್ಲಿ ಜಾಗ್ರತೆ ಮೂಡಿಸಿ ರಿಪ್ಲೇಕ್ಟರ್ ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಆದರೂ ಈ ಬಗ್ಗೆ ನಿರಂತರ ಜಾಗ್ರತೆ ಮೂಡಿಸುವ ಅವಶ್ಯಕತೆ ಇರುತ್ತದೆ.

ಆದ್ದರಿಂದ ದಯಮಾಡಿ ರಾತ್ರಿಯಾಗಲಿ ಅಥವಾ ಹಗಲಿಯಾಗಲಿ ವಾಹನವನ್ನು ನಿಧಾನವಾಗಿ ಚಲಾಯಿಸಿಎಂದು ಸಯುಚನೆ ನೀಡಿದ ಕಾಗವಾಡ ಪೋಲಿಸ ಠಾಣೆ ಅಧಿಕಾರಿಗಳು