ಉ.ಕ ಸುದ್ದಿಜಾಲ ಮೋಳೆ :
ಲೆಕ್ಕ ಇಟ್ಟ ಕೃಷಿ ಮಾಡಿದರೆ ಪಕ್ಕಾ ಲೆಕ್ಕ ಸಿಗುತ್ತೆ, ಮಾಡುವ ಕಾಯಕದ ಮೇಲೆ ಶ್ರದ್ದಾ ಭಕ್ತಿ ಇರಬೇಕು ಆಗ ಮಾತ್ರ ಕೃಷಿಯಲ್ಲಿ ಯಶಸ್ಸು ಸಾಧಿಸಬಹುದು ಎಂದು ಚಿಕ್ಕೋಡಿ ಕೃಷಿ ಉಪ ನಿರ್ದೇಶಕ ಹಿಂದುರಾವ ಕೋಳೆಕರ ಹೇಳಿದರು.
ಕಾಗವಾಡ ತಾಲೂಕಿನ ಕೌಲಗುಡ್ಡ ಸಿದ್ದಾಶ್ರಮದಲ್ಲಿ ICAR Icar ಬರ್ಡ್ಸ ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿಚಾರ ಗೋಷ್ಠಿ ಕಾರ್ಯಕ್ರಮದಲ್ಲಿ ರೈತರನ್ನ ಉದ್ದೇಶಿಸಿ ಮಾತನಾಡಿದರು. ರೈತ ಮೊದಲು ಕೃಷಿಯ ಬಗ್ಗೆ ಯೋಜನೆ ತಯಾರಿ ಮಾಡಿಕೊಳ್ಳಬೇಕು ಅಂದಾಗ ಮಾತ್ರ ಏನಾದರು ಮಾಡಲಿಕ್ಕೆ ಸಾಧ್ಯ,
ಹೀಗಾಗಿ ಕೃಷಿ ಇಲಾಖೆ ತಂಡ ನಿಮ್ಮ ಬಳಿ ಬಂದಿದೆ. ಕಾಗವಾಡ ತಾಲುಕಿನ ಒಟ್ಟು ಏಳು ಹಳ್ಳಿ ತೆಗೆದುಕೊಂಡು ರೈತರಗೆ ಕೃಷಿ ಬಗ್ಗೆ ಮಾಹಿತಿ ಕೊಡಲಾಗುವುದು. ರೈತ ಏನ ತಪ್ಪ ಮಾಡತ್ತಿದ್ದಾನೆ, ಯಾವ ಜಮೀನಿಗೆ ಯಾವ ಬೆಳೆ ಬೆಳೆಯಲು ಯೋಗ್ಯ ಎಂಬುದರ ಬಗ್ಗೆ ಕೃಷಿ ಇಲಾಖೆ ತಂಡ ರಚನೆ ಮಾಡಿ ತಿಳಿ ಹೇಳುತ್ತದೆ. ಕೃಷಿ ವಿಚಾರ ಗೋಷ್ಠಿ ಪ್ರತಿ ಹಳ್ಳಿಗಳಲ್ಲಿಯೂ ನಡೆಯಬೇಕಿದೆ. ಇಂತಹ ಕೃಷಿ ವಿಚಾರ ಗೋಷ್ಠಿಯಲ್ಲಿ ಹೊಸ ಯೋಜನೆ ತರಲಿಕೆ ಅನಕೂಲವಾಗಲಿದೆ.
ಕೃಷಿ ವಿಚಾರ ಗೋಷ್ಠಿಯಲ್ಲಿ ಸಿದ್ಧಯೋಗಿ ಅಮರೇಶ್ವರ ಮಹರಾಜರು ಸಾನಿಧ್ಯ ವಹಿಸಿದ್ದರು. ICAR ಬರ್ಡ್ಸ ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ ಮುಖ್ಯಸ್ಥರಾದ ಆರ್ ಎಂ ಪಾಟೀಲ, ಅಥಣಿ ಸಹಾಯಕ ಕೃಷಿ ಅಧಿಕಾರಿ ಅಥಣಿ ನಿಂಗಪ್ಪ ಬಿರಾದರ, ತುಕಾನಟ್ಟಿ ಕೃಷಿ ವಿಜ್ಞಾನಿಗಳು ಡಿ ಎನ್ ಮೇತ್ರಿ, ಎಂ ಎನ್ ನಲವಾಡೆ ಹಾಗೂ ಚಿಕ್ಕೋಡಿ ಉಪವಿಭಾಗದ ಕೃಷಿ ಸಿಬಂಧಿಗಳು ಹಾಗೂ ನೂರಾರು ರೈತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.