ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ ಹಾಗೂ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಗಳಿಗೆ ಬಾಂಬ್‌ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದು ಕಿರಣ ಮೋಷಿ (48) ಎಂಬ ಆರೋಪಿ ಎಂಬುದು ಗೊತ್ತಾಗಿದೆ.

ಬೆಳಗಾವಿ ಜಿಲ್ಲೆಯ ಜಿಲ್ಲೆಯ ಹುಕ್ಕೇರಿ ಪಟ್ಟಣದ ಕಿರಣ ಮೋಷಿ ಸದ್ಯ ಬೆಂಗಳೂರಿನಲ್ಲಿದ್ದು, ಆತನನ್ನು ಬಂಧಿಸಲು ಪೊಲೀಸ್ ತಂಡ ತೆರಳಿದೆ’ ಎಂದು ನಗರ ಪೊಲೀಸ್‌ ಕಮಿಷನರ್ ಎಸ್‌.ಎನ್‌. ಸಿದ್ರಾಮಪ್ಪ ಮಾಹಿತಿ ನೀಡಿದರು.

ಆರೋಪಿಯು ತನ್ನ ಪತ್ನಿ ಹೆಸರಿನಲ್ಲಿರುವ ಸಿಮ್‌ಕಾರ್ಡ್‌ನ್ನೂ ಬಳಸಿ, ಮೂರು ಬೇರೆಬೇರೆ ಮೊಬೈಲ್‌ ಸಂಖ್ಯೆಗಳಿಂದ ಕರೆ ಮಾಡಿದ್ದ. ಕಳೆದ ವರ್ಷ ಕೂಡ ಈತ ಬೇರೊಬ್ಬರ ಸಾಮಾಜಿಕ ಜಾಲತಾಣದ ಅಕೌಂಟ್‌ ಹ್ಯಾಕ್‌ ಮಾಡಿ, ಅಶ್ಲೀಲ ವಿಡಿಯೊ ಪೋಸ್ಟ್‌ ಮಾಡಿದ್ದ. ಸೈಬರ್‌ ಅಪರಾಧದಡಿ ಬಂಧನಕ್ಕೆ ಒಳಗಾಗಿ 10 ದಿನ ಹಿಂಡಲಗಾ ಜೈಲಿನಲ್ಲಿದ್ದ ಎಂದರು.