ಉ.ಕ ಸುದ್ದಿಜಾಲ ಅಥಣಿ :

ಇತ್ತೀಚಿನ ದಿನಗಳಲ್ಲಿ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ವತ್ತಿನ ಅಪರಾಧ ಪ್ರಕರಣ ಹೆಚ್ಚಾದ ಹಿನ್ನೆಲೆ ಬೆಳಗಾವಿ ಎಸ್ ಪಿ ಡಾ ಭೀಮಾಶಂಕರ ಗುಳೇದ ಹಾಗೂ ಐಪಿಎಸ್ ಅಧಿಕಾರಿ ಶೃತಿ ಏನ್ ಅವರ ಆದೇಶದ ಮೇರೆಗೆ ಅಥಣಿ ಪೊಲೀಸ್ ರಿಂದ ಭರ್ಜರಿ ಕಾರ್ಯಾಚರಣೆ ಮೂಲಕ ಕಳ್ಳರನ್ನ ಸದೆಬಡಿದು ಸುಮಾರು 13 ಬೈಕ್ ವಶಕ್ಕೆ ಪಡೆದಿದ್ದಾರೆ.

ಹೆಚ್ಚುವರಿ ಪೊಲೀಸ್ ಅಧಿಕ್ಷಕ ಆರ್ ಬಿ ಬಸರಗಿ, ಡಿ ಎಸ್ ಪಿ ಪ್ರಶಾಂತ ಮುನ್ನೊಳ್ಳಿ ಸಿಪಿಐ ರವೀಂದ್ರ ನಾಯ್ಕೋಡಿ ನೇತೃತ್ವದ ತಂಡ ಕಾರ್ಯಚರಣೇ ಮಾಡುವ ಮೂಲಕ ಕಳ್ಳರನ್ನ ಪತ್ತೆಹಚ್ಚಿದ್ದಾರೆ.

ನೆರೆಯ ಮಹಾರಾಷ್ಟ್ರದ ಜತ್ತ ತಾಲೂಕಿನ ಶಿಂಧೂರ ಗ್ರಾಮದ ಅಮೋಲ ಜಿತೇಂದ್ರ ಪವಾರ ಹಾಗೂ ಅಥಣಿ ತಾಲೂಕಿನ ಮಧಭಾವಿ ಗ್ರಾಮದ ಲಖನ್ ಮಾರುತಿ ಸುಂಗಾರೆ ಬೈಕ್ ಕಳುವು ಮಾಡಿ ಆರು ಬೈಕ್ ಮಾರಾಟ ಮಾಡಿದ್ದರು ಇಬ್ಬರನ್ನ ಪತ್ತೆಹಚ್ಚಿದ ಪೊಲೀಸರು

ಸುಮಾರು 47,5000 ಮೌಲ್ಯದ 13 ಬೈಕ್ ವಶಪಡಿಸಿಕೊಂಡು ಆರೋಪಿತರನ್ನ ನ್ಯಾಯಾಂಗ ಬಂಧನಕ್ಕೆ ಒಳ ಪಡಿಸಿದ್ದಾರೆ.