ಉ.ಕ ಸುದ್ದಿಜಾಲ ಹುಕ್ಕೇರಿ :

ಕಾಂಗ್ರೆಸ್ ಕಾರ್ಯಕರ್ತರಿಂದ ಇದೆಂಥ ಗೂಂಡಾಗಿರಿ. ಕಾಂಗ್ರೆಸ್ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ. ಚುನಾವಣೆಯಲ್ಲಿ ಸೋತಿದ್ದಕ್ಕೆ ಗೆದ್ದ ಅಭ್ಯರ್ಥಿಯ ಸೂಚಕನ ಮೇಲೆ ಮಾರಣಾಂತಿಕ ಹಲ್ಲೆ. ಸಂಕೇಶ್ವರ ಪುರಸಭೆ ಚುನಾವಣೆಯಲ್ಲಿ ಸೋತ ಕೈ ಕಾರ್ಯಕರ್ತರಿಂದ ಗೂಂಡಾಗಿರಿ.

ಚುನಾವಣೆಯಲ್ಲಿ ಸೋತಿದ್ದಕ್ಕೆ ಗೆದ್ದ ಅಭ್ಯರ್ಥಿಯ ಸೂಚಕನ ಮೇಲೆ ಮಾರಣಾಂತಿಕ ಹಲ್ಲೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ವಾರ್ಡ ನಂಬರ 21 ರ ಉಪ ಚುನಾವಣೆಯ ಫಲಿತಾಂಶ ನಿನ್ನೆ ಪ್ರಕಟ ಹಿನ್ನಲೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಂಗಾರಾಮ ಭೂಸಗೋಳ ಗೆಲುವು ಕಾಂಗ್ರೆಸ್ ಅಭ್ಯರ್ಥಿ ಭಾರತಿ ಮರಡಿಗೆ ಸೋಲು ಹಿನ್ನೆಲೆ ನಿನ್ನೆ ಫಲಿತಾಂಶ ಬಂದಾಗಿನಿಂದಲೂ ರೌಡಿಸಂ ಮಾಡುತ್ತಿರುವ ಕೈ ಕಾರ್ಯಕರ್ತರು.

ಮತದಾರರಿಗೂ ಬೆದರಿಕೆ ಹಾಕುತ್ತಿರುವ ಪುಂಡರು ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಂಗಾರಮ ಭೂಸಗೋಳ ಆರೋಪ ಮಾಡಿದ್ದಾರೆ.

ಗೆದ್ದ ಅಭ್ಯರ್ಥಿಯ ಸೂಚಕರಾಗಿದ್ದ ವಕೀಲ ವಿಕ್ರಮ ಭೂಸಗೋಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ವಕೀಲ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಣ್ಣು ಮುಚ್ಚಿ ಕುಳಿತ ಸಂಕೇಶ್ವರ ಪೊಲೀಸರು ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.