ಉ.ಕ ಸುದ್ದಿಜಾಲ ಬಾಗಲಕೋಟೆ :
ನೇಣು ಬಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಅರಕೇರಿ ಗ್ರಾಮದಲ್ಲಿ ಘಟನೆ. ಅಜಯ್ (24) ಸಾವಿಗೀಡಾಗಿರುವ ಯುವಕ.
ಪ್ರೇಯಸಿ ಅನು ಜೊತೆ ಶಿರಗುಪ್ಪಿ ಗ್ರಾಮಕ್ಕೆ ಬಂದಿದ್ದ ಯುವಕ ಅಜಯ ಅನು ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಮೃತ ಯುವಕ ಅಜಯ್ & ಅನು ಒಬ್ಬರನೊಬ್ಬರು ಪ್ರೀತಿಸುತ್ತಿದ್ರು ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು.
ಈ ವೇಳೆ ಪ್ರೇಯಸಿ ಅನು ಗೆ ಬೆದರಿಕೆ ಹಾಕಲು ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದನೆಂಬ ಮಾಹಿತಿ. ಬೆದರಿಕೆ ಹಾಕುತ್ತಲೇ ನೇಣು ಹಾಕಿಕೊಂಡು ಯುವಕ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.