ಉ.ಕ ಸುದ್ದಿಜಾಲ ಬೆಳಗಾವಿ :

ಬಿಲ್ಡಿಂಗ್ ಹಿಂಬಾಗದಲ್ಲಿದ್ದ ಹೂ ಕೀಳಲು ಹೋಗಿ ಬಿದ್ದು ಮೃತ ಪಟ್ಟಿದ್ದ ಬಾಲಕಿ. ಅಂತ್ಯಕ್ರಿಯೆಗೆ ಯಾರೂ ಮುಂದೆ ಬಾರದಿದ್ದಾಗ ಮುಸ್ಲಿಂ ಬಾಂಧವರು ಬಂದು ಅಂತ್ಯಕ್ರಿಯೆ ನೆರವೆರಿಸಿ‌ ಮಾನವೀಯತೆ ಮೆರದಿದ್ದಾರೆ.

ಗುರುವಾರ ಬೆಳಗಾವಿಯ ವೀರಭದ್ರ ನಗರದ ನಿವಾಸಿ ವಿದ್ಯಾಶ್ರೀ ಹೆಗಡೆ (10) ಮೃತಪಟ್ಟಿದ್ದ ಬಾಲಕಿ ಮೂಲತಃ ಉಡುಪಿಯವರಾದ ವಿದ್ಯಾಶ್ರೀ ಪೋಷಕರು ಬಡ ಕುಟುಂಬದವರಾಗಿದ್ದು, ಕೆಲ ವರ್ಷಗಳಿಂದ ಬೆಳಗಾವಿಯ ವೀರಭದ್ರ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ವಿದ್ಯಾಶ್ರೀ ನಿಧನದ ಸುದ್ದಿ ತಿಳಿದು ಕುಟುಂಬಸ್ಥರು ಯಾರೂ ಆಸ್ಪತ್ರೆಗೆ ಬಂದು‌ ಶವವನ್ನು ಪಡೆದುಕೊಳ್ಳಲಿಲ್ಲ.

ವಿದ್ಯಾಶ್ರೀ ಅಂತ್ಯಸಂಸ್ಕಾರ

ಪೋಷಕರ ಅಸಹಾಯಕ ಸ್ಥಿತಿ ಕಂಡು ಮರುಗಿದ ವೀರಭದ್ರ ನಗರದ ಮುಸ್ಲಿಂ ಬಾಂಧವರು ತಮ್ಮವರಿಗೆ ತಿಳಿಸಿ ತಾವೇ ಮುಂದೆ ನಿಂತು ವಿದ್ಯಾಶ್ರೀಯ ಅಂತ್ಯ ಕ್ರಿಯೆಯನ್ನು ಸದಾಶಿವ ನಗರದ ಲಿಂಗಾಯತ ರುದ್ರ ಭೂಮಿಯಲ್ಲಿ ಲಿಂಗಾಯತ ವಿಧಿ ವಿಧಾನದಂತೆ ನೆರವೆರಿಸಿದ್ದಾರೆ. ಮುಸ್ಲಿಂ ಬಾಂಧವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ. ಗಾಯಗೊಂಡಿದ್ದ ಬಾಲಕಿಯನ್ನ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಿ, ಆಸ್ಪತ್ರೆಯ ಖರ್ಚನ್ನು ಭರಿಸಿದ್ದ ಮುಸ್ಲಿಂ ಬಾಂಧವರು.